ಕಿರುಚಿತ್ರಗಳು ಪ್ರಜ್ಞಾವಂತ ಸಮಾಜ ನಿರ್ಮಿಸಲಿ

sdm mundina bagadali kiruchitra copyಉಜಿರೆ : ಮುಂದಿನ ಭಾಗದಲ್ಲಿ ಕಿರುಚಿತ್ರದಿಂದ ಜನಜಾಗೃತಿ ಸಾಧ್ಯವಾಗಲಿ ಎಂದು ಮೂಡಬಿದ್ರೆಯ ಜೈನ ಬಸದಿಯ ಭಟ್ಟಾರಕ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಹಾರೈಸಿದರು. ಅವರು ಇಲ್ಲಿಯ ಜೈನಬಸದಿಯಲ್ಲಿ ಆ.20 ರಂದು  ಎಸ್‌ಡಿಎಂ ಮಲ್ಟಿಮೀಡಿಯಾ ಮತ್ತು ಎ.ಆರ್ ಪ್ರೊಡಕ್ಷನ್ ಬೆಂಬಲದೊಂದಿಗೆ ನಿರ್ಮಾಣವಾಗಿರುವ ಮುಂದಿನ ಭಾಗದಲ್ಲಿ ಕಿರುಚಿತ್ರದ ಧ್ವನಿಸುರಳಿ ಲೋಕಾರ್ಪಣೆ ಮಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಂದಿನ ಭಾಗದಲಿ ಕಿರುಚಿತ್ರದ ನಾಯಕ ನಟ ರವಿ ಶೆಣೈ, ನಿರ್ದೇಶಕ ರಂಜಿತ್‌ಗೌಡ ನಿಡಗೋಡು, ನಿರ್ಮಾಪಕ ರಾಜೇಂದ್ರ ನಾಯಕ್, ಸಹನಿರ್ಮಾಪಕ ಆಕರ್ಷ್, ಸಂಗೀತ ನಿರ್ದೇಶಕ ಹರ್ಷಿತ್‌ಶೆಟ್ಟಿ, ಹಿನ್ನಲೆಗಾಯಕ ಶಿವಶಂಕರ್ ನೀನಾಸಂ, ಹಾಗೂ ಎಸ್.ಡಿ.ಎಂ. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಉಮಾನಾಥ ಶೆಣೈ ಇತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.