ಶತ್ರುಪಡೆ ಸದೆಬಡಿದ ರಣಧೀರ ಮೇಲಂತಬೆಟ್ಟುವಿನ ನಾಯಕ್ ಶಂಕರ್ ಸಪಲ್ಯರಿಗೆ ಸೇನಾ ಪದಕ

shankar sapalya copyಮೇಲಂತಬೆಟ್ಟು : ಉತ್ತರ ಕಾಶ್ಮೀರದಲ್ಲಿ ಭಯೋತ್ಪಾದಕರ ನುಸುಳುವಿಕೆ ಪ್ರಯತ್ನವನ್ನು ತಡೆಯುವಲ್ಲಿ ಹಾಗೂ ತಾಯ್ನಾಡಿಗೆ ಹೋರಾಡಿದ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕು ಮೇಲಂತಬೆಟ್ಟು ಗ್ರಾಮದ ನಾಯಕ್ ಶಂಕರ್ ಸಪಲ್ಯ ಅವರಿಗೆ ಅತ್ಯುನ್ನತ ಗೌರವ ಸೇನಾ ಪದಕ ಪುರಸ್ಕಾರ ಲಭಿಸಿದೆ.
ಮೇಲಂತಬೆಟ್ಟು ಗ್ರಾಮದ ಗಿರಿಯಪ್ಪ ಮತ್ತು ಗೌರಿ ದಂಪತಿ ಪುತ್ರರಾಗಿರುವ ಶಂಕರ್ ಸಪಲ್ಯ ಅವರು 17 ವರ್ಷಗಳ ದೇಶ ಸೇವೆ ಮಾಡಿದ್ದು ಇವರ ಶೌರ್ಯ ಜಿಲ್ಲೆಗೆ ಹೆಮ್ಮೆ ಮತ್ತು ಆದರ್ಶಪ್ರಾಯವಾಗಿದೆ. ಹುಟ್ಟೂರು ಜನತೆಗೆ ತಾನು ಚಿರಋಣಿ ಎಂದು ಕೃತಜ್ಞತೆ ವ್ಯಕ್ತಪಡಿಸುವ ಅವರು ನಮ್ಮಿಂದ ಎಷ್ಟು ಉತ್ತಮವಾದ ಕಾರ್ಯ ಮಾಡಲು ಸಾಧ್ಯ ಅದನ್ನು ಮಾಡಿಯೇ ತೀರುತ್ತೇನೆ ಎಂದು ತಮ್ಮ ಧ್ಯೇಯ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.