ಸೆ.3ರಂದು ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀಗಳ 8ನೇ ವರ್ಷದ ಸದ್ಗುರು ಪಟ್ಟಾಭಿಷೇಕ ವರ್ಧಂತ್ಯುತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Bhrammananda Swamiji Kanyadi copyಧರ್ಮಸ್ಥಳ : ದಕ್ಷಿಣ ಅಯೋಧ್ಯೆ ಎಂದು ಖ್ಯಾತಿಯನ್ನು ಹೊಂದಿರುವ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ೮ನೇ ವರ್ಷದ ಸದ್ಗುರು ಪಟ್ಟಾಭಿಷೇಕದ ವರ್ಧಂತ್ಯುತ್ಸವ ಸೆ.3ರಂದು ವೇ.ಮೂ. ಲಕ್ಷ್ಮೀಪತಿ ಗೋಪಾಲಾಚಾರ್ಯ ಬೆಂಗಳೂರು ಇವರ ವೈಧಿಕ ವಿದಿ-ವಿಧಾನಗಳೊಂದಿಗೆ ನಡೆಯಲಿದೆ.
ಈ ಪುಣ್ಯ ಕ್ಷೇತ್ರದ ನಿರ್ಮಾತೃ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ರಾಮೈಕ್ಯರಾಗಿ 8 ವರ್ಷಗಳೇ ಸಂದಿವೆ ತದನಂತರ ಈ ಕ್ಷೇತ್ರದ ಗುರುಪೀಠಕ್ಕೆ ಉತ್ತರಾಧಿಕಾರಿಗಳಾಗಿ ಬಂದವರು ಜ್ಞಾನ ಯೋಗಿಗಳೂ, ತಪಸ್ವಿಯೂ, ಶಿಕ್ಷಣ ತಜ್ಞರೂ ಆದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು, ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಭಾರತದ 9 ಕಡೆ ಶಾಖಾ ಮಠಗಳನ್ನು ನಿರ್ಮಿಸಬೇಕೆಂಬ ಇಚ್ಛೆಯನ್ನು ಹೊಂದಿದ್ದರು. ಈ ಶಾಖಾ ಮಠಗಳ ಉದ್ದೇಶ ಎಲ್ಲಾ ಜಾತಿ-ಜನಾಂಗದ ಹಿಂದುಳಿದ ಜನಾಂಗಕ್ಕೆ ಉನ್ನತವಾದ ಮೌಲ್ಯಯುಕ್ತವಾದ ಸಂಸ್ಕಾರಭರಿತವಾದ ಶಿಕ್ಷಣವನ್ನು ಕೊಟ್ಟು ಕರ್ಮಯೋಗದ ಮುಖೇನ ಶ್ರೀರಾಮ ದೇವರ ತತ್ವಾದರ್ಶಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಆಗಿದೆ.
ಇದಕ್ಕೆ ಪೂರಕವಾಗಿ ಉಡುಪಿಯಲ್ಲಿ 15 ಎಕ್ರೆ ಜಾಗದಲ್ಲಿ ಐಟಿಐ ಕಾಲೇಜು ಪ್ರಾರಂಭವಾಗಿ ಅಲ್ಲಿಯ ಸಮಿತಿ ಸದಸ್ಯರಿಂದಲೇ ಉಚಿತ ಶಿಕ್ಷಣ ನಡೆಯುತ್ತಾ ಇದೆ. ಎರಡನೆಯದಾಗಿ ಭಟ್ಕಳದಲ್ಲಿ 800 ವರ್ಷಗಳ ಹಿಂದೆ ರಾಮಾನುಜಾಚಾರ್ಯರ ಕಾಲದ ಮಠ ಕ್ಷೇತ್ರದ ಆಡಳಿತ ವ್ಯಾಪ್ತಿಗೆ ಒಳಪಟ್ಟಿದೆ. ಮೂರನೆಯದಾಗಿ ಹೊನ್ನಾವರದಲ್ಲಿ ಶಾಖಾ ಮಠಕ್ಕೆ ಜಾಗ ಖರೀದಿಯಾಗಿದೆ. ನಾಲ್ಕನೆಯದಾಗಿ ಭಟ್ಕಳದ ಕರಿಕಲ್ ಎಂಬಲ್ಲಿ ಧ್ಯಾನ ಮಂದಿರದ ನಿರ್ಮಾಣದ ಶಿಲಾನ್ಯಾಸ ಆಗಿ ಈಗ ಕಾಮಗಾರಿ ನಡೆಯುತ್ತಿದೆ. ಐದನೆಯದಾಗಿ ಉತ್ತರ ಭಾರತದ ಋಷಿಕೇಶದಲ್ಲಿ ಶಾಖಾ ಮಠದ ಸಿದ್ದತೆ ನಡೆಯುತ್ತಿದೆ. ಭಕ್ತರ ಸಹಕಾರದಿಂದ ಶ್ರೀ ಗುರುದೇವ ಮಠದಲ್ಲಿ ಶ್ರೀ ಆತ್ಮಾನಂದ ಸರಸ್ವತಿ ವಿದ್ಯಾಲಯದಲ್ಲಿ ೪೫೦ಕ್ಕೂ ಹೆಚ್ಚು ಮಕ್ಕಳು ಕರ್ನಾಟಕ ಮೂಲೆ ಮೂಲೆಗಳಿಂದ ಎಲ್ಲಾ ಜಾತಿ ಜನಾಂಗದ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ವಸತಿ ಸೌಲಭ್ಯದೊಂದಿಗೆ ಶಿಕ್ಷಣ ನಡೆಯುತ್ತಿದೆ.

ಶ್ರೀರಾಮ ಕ್ಷೇತ್ರದ ಭಕ್ತಾಧಿಗಳಿಗೆ ಪ್ರತಿದಿನ ಅನ್ನಧಾನ ನಡೆಯುತ್ತಾ ಇದೆ.
ಸೆ.3ರಂದು ಸ್ವಾಮೀಜಿಯವರ ೮ನೇ ವರ್ಷದ ಸದ್ಗುರು ಪಟ್ಟಾಭಿಷೇಕದ ವರ್ಧಂತ್ಯುತ್ಸವವನ್ನು ರಾಜ್ಯ ಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಉದ್ಘಾಟಿಸಲಿದ್ದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಸರಕಾರದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಅರಣ್ಯ ಸಚಿವ ಬಿ. ರಮಾನಾಥ ರೈ, ಮೀನುಗಾರಿಕ ಸಚಿವ ಪ್ರಮೋದ್ ಮಧ್ವರಾಜ್, ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯ ಆರ್ಯ ಈಡಿಗ ಸಂಘದ ಅಧ್ಯಕ್ಷ ಜೆ.ಪಿ. ನಾರಾಯಣ ಸ್ವಾಮಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಶಾಸಕ ಸುನಿಲ್ ಕುಮಾರ್ ಕಾರ್ಕಳ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಭಟ್ಕಳ ಶಾಸಕ ಮಂಕಾಳ್ ಎಸ್. ವೈದ್ಯ ಹಾಗೂ ಉಭಯ ಜಿಲ್ಲೆಗಳ ರಾಜಕೀಯ ಮುಖಂಡರುಗಳು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರುಗಳು, ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.