ಬಿಜೆಪಿ ತಿರಂಗಾ ಯಾತ್ರೆ ಬೆಳ್ತಂಗಡಿಯಲ್ಲಿ ಸಮಾರೋಪ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

thiranga yathre bltd copyಬೆಳ್ತಂಗಡಿ : ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬೆಳ್ತಂಗಡಿ ತಾಲೂಕಿನಾಧ್ಯಂತ, ಸ್ವಾತಂತ್ರ್ಯ ಸಿಕ್ಕಿದ 70ನೇ ವರ್ಷದ ಸಂಭ್ರಮದ ಭಾಗವಾಗಿ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯ ಕೊನೆಯ ಸುತ್ತಿನಲ್ಲಿ ಪುಂಜಾಲಕಟ್ಟೆಯಿಂದ ಪ್ರಾರಂಭಗೊಂಡ ತಿರಂಗಾ ಯಾತ್ರೆಯು ಆ. 23 ರಂದು ಬೆಳ್ತಂಗಡಿ ಬಿಜೆಪಿ ಕಚೇರಿ ಮುಂಭಾಗದಲ್ಲಿ ಸಮಾರೋಪಗೊಂಡಿತು.
ಈ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಧರ್ಮಜಾಗರಣ ವಿಭಾಗದ ಸಂಚಾಲಕ ದಿನಕರ ಆದೇಲು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ದೇಶದ ವಿವಿಧ ಕಡೆಗಳಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮತ್ತು ರಾಷ್ಟ್ರದ ಮೇಲಿನ ಜನರ ಭಾವನಾತ್ಮಕ ಭಕ್ತಿಯನ್ನು ಪ್ರಶ್ನಿಸತಕ್ಕ ರೀತಿಯಲ್ಲಿ ದೇಶದ್ರೋಹಿಗಳಿಂದ ಕೆಲವೊಂದು ಕೃತ್ಯಗಳು ನಡೆಯುತ್ತಿದ್ದು ಅವುಗಳನ್ನು ಹತ್ತಿಕ್ಕುವಲ್ಲಿ ಆಡಳಿತ ವಿಫಲವಾಗಿದೆ. ಕೆಲವೊಂದು ರಾಷ್ಟ್ರದ್ರೋಹಿ ಸಂಘಟನೆಗಳು ಅನಗತ್ಯ ಗೊಂದಲಗಳನ್ನು ಉಂಟುಮಾಡಿ ಸ್ವಾತಂತ್ರ್ಯದ ಅಸ್ತಿತ್ವಕ್ಕೆ ಕೊಡಲಿಯೇಟು ನೀಡಲು ಪ್ರಯತ್ನಿಸುತ್ತಿದೆ ಎಂದು ಅವರು ತಮ್ಮ ಬಾಷಣದಲ್ಲಿ ತಿಳಿಸಿದರು. ಈ ಸಂದರ್ಭ ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಕಾರ್ಯದರ್ಶಿ ರಕ್ಷಿತ್ ಶೆಟ್ಟಿ, ಜಿ.ಪಂ. ಸದಸ್ಯರಾದ ಮಮತಾ ಎಂ. ಶೆಟ್ಟಿ, ಕೆ. ಕೊರಗಪ್ಪ ನಾಯ್ಕ, ಧನಲಕ್ಷ್ಮೀ ಜನಾರ್ದನ್, ಪ್ರಭಾಕರ ಶೆಟ್ಟಿ ಉಪ್ಪಡ್ಕ, ನಾರಾಯಣ ಆಚಾರ್, ಸೀತಾರಾಮ್ ಬಿ.ಎಸ್, ಮಂಜುಳಾ ಉಮೇಶ್, ಗಿರೀಶ್ ಡೋಂಗ್ರೆ, ಸಂತೋಷ್ ಕುಮಾರ್ ಲಾಲ, ಜೋಯೆಲ್ ಮೆಂಡೋನ್ಸಾ, ಅನಿಲ್ ನಾಯ್ಗ, ಸುಧಾಕರ್ ಬಿ.ಎಲ್, ಮಂಜುನಾಥ ಸಾಲ್ಯಾನ್, ತುಳಸಿ ಜಿ. ಹಾರಬೆ, ಸದಾನಂದ ಪೂಜಾರಿ ಉಂಗಿಲಬೈಲು, ಅಶೋಕ್ ಕೋಟ್ಯಾನ್, ರಾಜ್‌ಗೋಪಾಲ್ ಭಟ್ ಮೊದಲಾದ ನಾಯಕರು ಭಾಗವಹಿಸಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.