ಬಜಿರೆ: ರೂ. 1.5 ಕೋಟಿ ವೆಚ್ಚದ ಸೇತುವೆ ಕಾಮಗಾರಿ ಶಾಸಕ ಬಂಗೇರರಿಂದ ಶಿಲಾನ್ಯಾಸ

bajire silanyasa copy ವೇಣೂರು: ಬೆಳ್ತಂಗಡಿ ತಾಲೂಕಿನ ಎಲ್ಲಾ ಪ್ರಮುಖ ಮೂಲಭೂತ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಅವಧಿಯ ಒಳಗೆ ನೆರವೇರಿಸಲು ಶ್ರಮಿಸುವುದಾಗಿ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಆ.23ರಂದು ಬಜಿರೆ ಪಿಜತ್ತಬೆಟ್ಟು ಹೇಡ್ಮೆಯಿಂದ ಕೊರಗಟ್ಟೆ ಸಂಪರ್ಕ ಸೇತುವೆಗೆ ರೂ. 1.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ತಾಲೂಕಿನ ಕುಗ್ರಾಮಗಳು ಇದೀಗ ಅಭಿವೃದ್ಧಿಯ ಹಂತದಲ್ಲಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಸಹಿಸುವುದಿಲ್ಲ ಎಂದ ಅವರು ಪಿಜತ್ತಬೆಟ್ಟು-ಕೊರಗಟ್ಟೆಯನ್ನು ದುರಸ್ತಿ ಹಾಗೂ ಡಾಮರೀಕರಣಕ್ಕೆ ಅನುದಾನ ಒದಗಿಸುವುದಾಗಿ ಹೇಳಿದರು.
ಸನ್ಮಾನ: ಈ ವೇಳೆಯಲ್ಲಿ ಗ್ರಾಮಸ್ಥರ ವತಿಯಿಂದ ವಸಂತ ಬಂಗೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಾರಾವಿ ಕ್ಷೇತ್ರದ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಅಳದಂಗಡಿ ಕ್ಷೇತ್ರದ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ, ವೇಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ಸದಸ್ಯರುಗಳಾದ ವಿಶಾಲಾಕ್ಷಿ, ಕಸ್ತೂರಿ, ವಿಕ್ಟರ್ ಮಿನೇಜಸ್, ರಾಜೇಶ್ ಪೂಜಾರಿ ಕೈತೇರಿ, ಹರೀಶ್ ಕುಮಾರ್ ಪೊಕ್ಕಿ, ರಮೇಶ್ ಪೂಜಾರಿ ಪಡ್ಡಾಯಿಮಜಲು, ಗುತ್ತಿಗೆದಾರ ಗಿರೀಶ್ ಕುಮಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಭಾಸ್ಕರ ಪೂಜಾರಿ ನಾಯರ್‌ಮೇರು ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.