ಪಿಲ್ಯ: ಮದ್ಯ ಸೇವನೆಯ ಚಟದಿಂದ ರಮೇಶ್ ಪೂಜಾರಿ ಆತ್ಮಹತ್ಯೆ

  ಪಿಲ್ಯ: ವ್ಯಕ್ತಿಯೋರ್ವರು ಮನೆಯ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಯದಲ್ಲಿ ಆ.22ರಂದು ನಡೆದಿದೆ.
ಪಿಲ್ಯ ಕುದ್ಯಾಡಿ ಗ್ರಾಮದ ಕೆಂಪನಬೆಟ್ಟು ನಿವಾಸಿ ಮಾಡೆಂಕಿಲ ಪೂಜಾರಿಯವರ ಪುತ್ರ ರಮೇಶ್ ಪೂಜಾರಿ (35ವ) ಆತ್ಮಹತ್ಯೆಗೆ ಶರಣಾದವರು. ಮದ್ಯ ಸೇವನೆಯ ಚಟವನ್ನು ಹೊಂದಿದ್ದ ಇವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಸಹೋದರ ಲಿಂಗಪ್ಪ ಬಂಗೇರ ನೀಡಿದ ದೂರಿನಲ್ಲಿ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.