ಸತ್ಯಮೇವ ಜಯತೆ ಇಂದು ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರದ ಭಕ್ತರು- ಗ್ರಾಮಸ್ಥರಿಂದ ವಿಶೇಷ ಕಾರ್ಯಕ್ರಮ

sathya

sathya1

sathya2

sathya3

sathya4

sathya5

sathya6

sathya7

sathya8

sathya9

sathya10

sathya11

sathya12

sathya13

sathya

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸತತವಾಗಿ ಕಳೆದ ನಾಲ್ಕು ವರ್ಷಗಳಿಂದ ಮಾಡಲಾಗುತ್ತಿದ್ದ, ಆರೋಪಕ್ಕೆ ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆ ಸಿ.ಬಿ.ಐ ನ್ಯಾಯಾಲಯಕ್ಕೆ ಸಲ್ಲಿಸಿದ ತನಿಖಾ ವರದಿಯ ಮುಖಾಂತರ ತೆರೆ ಬಿದ್ದಿರುವುದನ್ನು ಮನಗಂಡು ಕ್ಷೇತ್ರದ ಗ್ರಾಮಸ್ಥರು ಮತ್ತು ಭಕ್ತಾಭಿಮಾನಿಗಳು ಶ್ರೀ ಕ್ಷೇತ್ರದಲ್ಲಿ ಇಂದು ‘ಸತ್ಯಮೇವ ಜಯತೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಇಂದು ಬೆಳಗ್ಗೆ 8.30ಕ್ಕೆ ಧರ್ಮಸ್ಥಳ ಗ್ರಾಮಸ್ಥರು ಹಾಗೂ ಕ್ಷೇತ್ರದ ಭಕ್ತರು ಶ್ರೀ ಮಂಜುನಾಥ ಸ್ವಾಮಿ, ಧರ್ಮದೇವತೆಗಳು ಮತ್ತು ಶ್ರೀ ಅಣ್ಣಪ್ಪ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿ, ಬಳಿಕ ಉಜಿರೆಗೆ ಬಂದು ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸಿದ್ದಾರೆ. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಬೆಳಗ್ಗೆ ಗಂಟೆ 10.30ಕ್ಕೆ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ವಿವಿಧ ಕ್ಷೇತ್ರದ ಗಣ್ಯಾತಿಗಣ್ಯರು ಭಾಗವಹಿಸಿದ್ದರು.
ಸೌಜನ್ಯ ಪ್ರಕರಣ ನಡೆದು ನಾಲ್ಕು ವರ್ಷಗಳಾಯಿತು. ನೊಂದ ಮನಸ್ಸುಗಳಿಗೆ ಸಾವಿನ ಬಗ್ಗೆ ಕಾನೂನು ರೀತಿಯ ನ್ಯಾಯ ಒದಗಿದೆ. ಪ್ರಚಾರದ ಗೀಳಿಗೋ, ತಮ್ಮ ಮನೋವಿಕೃತಿಗೋ ನಮ್ಮೆಲ್ಲರ ಶ್ರದ್ಧಾಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಎಳೆದು ತಂದರು. ನಮ್ಮೆಲ್ಲರ ಶ್ರದ್ಧಾ-ನಂಬಿಕೆಗಳ ಜೊತೆಗೆ ಚೆಲ್ಲಾಟವಾಡಿದರೂ ಶ್ರೀ ಕ್ಷೇತ್ರ ಧೃತಿಗೆಡಲಿಲ್ಲ. ಧರ್ಮಸ್ಥಳದ ಏಳಿಗೆ ಸಹಿಸದವರು ಕ್ಷೇತ್ರಕ್ಕೆ ಮತ್ತು ಹೆಗ್ಗಡೆ ಕುಟುಂಬಕ್ಕೆ ಮಸಿ ಬಳಿಯಲು ತಮ್ಮ ಅಡ್ಡದಾರಿಗಳ ಮೂಲಕ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಿ.ಬಿ.ಐ ವರದಿಯಿಂದಾಗಿ ಕ್ಷೇತ್ರದ ಮೇಲಿನ ಸುಳ್ಳು ಆರೋಪಕ್ಕೆ ಮುಕ್ತಿ ಸಿಕ್ಕಿದೆ. ಧರ್ಮಕ್ಕೆ, ಸತ್ಯಕ್ಕೆ ಎಂದಿಗೂ ಗೆಲುವು ಎಂಬುದನ್ನು ಪ್ರತಿಯೊಬ್ಬರೂ ತಿಳಿಯಬೇಕಾಗಿದೆ ಎಂದು ಹಿತರಕ್ಷಣಾ ವೇದಿಕೆ ಧರ್ಮಸ್ಥಳ ಹಾಗೂ ಸತ್ಯಮೇವ ಜಯತೆ ಕಾರ್ಯಕ್ರಮ ಸಮಿತಿ ಧರ್ಮಸ್ಥಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧರ್ಮಸ್ಥಳ ಅಮೃತ ವರ್ಷಿಣಿ ಸಭಾ ಭವನದಲ್ಲಿ ಮುಖ್ಯ ಭಾಷಣಕಾರರಾಗಿ ಉಜಿರೆ ಅಶೋಕ್ ಭಟ್, ಮಂಗಳೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್, ಶ್ರೀಮತಿ ರಾಜಶ್ರೀ ಎಸ್.ಹೆಗ್ಡೆ, ಡಿ.ಎ ರಹಿಮಾನ್, ಯು.ಸಿ ಪೌಲೋಸ್, ಎಲ್.ಎಚ್ ಮಂಜುನಾಥ್, ಮಾಜಿ ಶಾಸಕರಾದ ಅಪ್ಪಣ್ಣ ಹೆಗ್ಡೆ, ವಕೀಲರಾದ ಸುಬ್ರಹಣ್ಯ ಕುಮಾರ್ ಅಗರ್ತ ಆಗಮಿಸಿದ್ದರು. ಕಾರ್ಯಕ್ರಮದ ಪ್ರಸ್ತಾವನೆಯನ್ನು ವಕೀಲರಾದ ಕೇಶವ ಗೌಡ ನಿರ್ವಹಿಸಿದರು. ಸತ್ಯಮೇವ ಜಯತೆ ಸಮಿತಿ ಅಧ್ಯಕ್ಷ ಚಂದನ್ ಕಾಮತ್ ಸ್ವಾಗತಿಸಿ, ಧನಕೀರ್ತಿ ಆರಿಗ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.