HomePage_Banner_
HomePage_Banner_
HomePage_Banner_

ವೀರಕೇಸರಿ ಬೆಳ್ತಂಗಡಿ ವತಿಯಿಂದ 60 ಸಾವಿರ ರೂ ಸಹಾಯಧನ

Dharmasthala nivasi shashikumarge 25000 neravu copy ಬೆಳ್ತಂಗಡಿ : ಸರ್ವೇ ಜನ ಸುಖಿನೋ ಭವಂತು ಸೇವಾ ಪರಮೊಧರ್ಮ ಎಂಬುವುದು ಸನಾತನ ಧರ್ಮದ ಪರಮ ಧ್ಯೇಯ. ಇದನ್ನು ಪಾಲನೆಯಲ್ಲಿ ಕಾರ್ಯರೂಪವಾಗಿ ಮಾಡುತ್ತಿರುವ ವೀರ ಕೇಸರಿ ಬೆಳ್ತಂಗಡಿಯ ಮಾಸಿಕ ಸೇವಾ ಯೋಜನೆಯಂತೆ ಆಗಸ್ಟ್ ತಿಂಗಳಲ್ಲಿ ಮೂರು ಸೇವಾ ಯೋಜನೆಯನ್ನು ಯಶಸ್ವಿಯಾಗಿ ತಲುಪಿದ್ದು ಮೂರು ತಿಂಗಳಲ್ಲಿ ಆರು ಸೇವಾ ಯೋಜನೆಯ ಮೂಲಕ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ತನ್ನ ನಾಲ್ಕನೇ ಸೇವಾ ಯೋಜನೆಯಾಗಿ ಟಿಬಿ ಕಾಯಿಲೆಯಿಂದ ಬಳಲುತ್ತಿರುವ ಬಳಂಜ ಗ್ರಾಮದ ನಿವಾಸಿ ಆನಂದ ಆಚಾರ್ಯ ಇವರ ಚಿಕಿತ್ಸೆಗೆ ವೀರಕೇಸರಿ ಬೆಳ್ತಂಗಡಿಯ ಸದಸ್ಯರು ಸಹಾಯ ಧನ ರೂ. 15,000ದ ಚೆಕ್ ಹಸ್ತಾಂತರಿಸಲಾಯಿತು. ಐದನೇ ಸೇವಾ ಯೋಜನೆಯಾಗಿ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಶಿರ್ಲಾಲು ಗ್ರಾಮದ ಬೈರೋಟ್ಟು ನಿವಾಸಿಯಾಗಿರುವ ಚಿದಾನಂದ ಇವರ ಚಿಕಿತ್ಸೆಗೆ ರೂ.20,000ದ ಚೆಕ್ ಹಸ್ತಾಂತರಿಸಲಾಯಿತು.
ಆರನೇ ಸೇವಾ ಯೋಜನೆಯಾಗಿ ಮೆದುಳಿನ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ನಿವಾಸಿಯಾಗಿರುವ ರಮೇಶ್‌ರವರ ಪುತ್ರ ಶಶಿಕುಮಾರ್ ಇವರ ಚಿಕಿತ್ಸೆಗೆ ರೂ. 25,000ಗಳ ಚೆಕ್ ಹಸ್ತಾಂತರಿಸಲಾಯಿತು. ಈ ಎಲ್ಲಾ ಫಲಾನುಭವಿಗಳಿಗೆ ಆ.14 ರಂದು ಸಹಾಯಧನವನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ವೀರಕೇಸರಿ ಬೆಳ್ತಂಗಡಿ ವಾಟ್ಸ್‌ಆಪ್ ಗ್ರೂಪ್‌ನ ಸುಮಾರು ಮೂವತ್ತು ಸದಸ್ಯರು ಹಾಜರಿದ್ದರು. ಹಸಿದು ಊಟ ಮಾಡುವುದು ಪ್ರಕೃತಿ, ಹಸಿಯದೆ ಊಟ ಮಾಡುವುದು ವಿಕೃತಿ, ಹಸಿದವನಿಗೆ ಅನ್ನ ನೀಡುವುದು ಹಿಂದೂ ಸಂಸ್ಕೃತಿ. ನಾಲ್ಕು ದಿನಗಳ ಜೀವನದ ಆಟದಲ್ಲಿ ಇದ್ದಷ್ಟು ಸಮಯ ಪರೋಪಕಾರಿಯಾಗಿ ಬದುಕ ಬೇಕೆಂಬ ದೃಢ ನಿಶ್ಚಯ ಮಾಡಿ, ಸಶಕ್ತರಿಂದ ಅಶಕ್ತರೆಡೆಗೆ ಎಂಬ ಧ್ಯೇಯ ವಾಕ್ಯವನ್ನು ಹೊತ್ತು ಪ್ರಾರಂಭವಾದ ವೀರ ಕೇಸರಿ ಬೆಳ್ತಂಗಡಿ ಗುಂಪಿನ ಎಲ್ಲಾ ಸದಸ್ಯರ ನೆರವಿನಿಂದ ಮೂರು ತಿಂಗಳಲ್ಲಿ ಆರು ಕುಟುಂಬಗಳಿಗೆ ನೆರವಾಗುವಲ್ಲಿ ಯಶಸ್ವಿಯಾಗಿದ್ದು ಇದರ ಸಂಪೂರ್ಣ ಯಶಸ್ಸನ್ನು ವೀರ ಕೇಸರಿ ಬೆಳ್ತಂಗಡಿಯ ಸದಸ್ಯರಿಗೆ ಸಮರ್ಪಿಸಿ. ಮುಂದಕ್ಕೂ ಎಲ್ಲರ ಪ್ರೋತ್ಸಾಹ ಬಯಸುತ್ತಾ ಇನ್ನಷ್ಟು ಸಮಾಜ ಮುಖಿ ಕಾರ್ಯಗಳನ್ನು ಹೊತ್ತು ಮುನ್ನಡೆಯುವ ವಿಶ್ವಾಸವಿದೆ ಎಂದು ವೀರ ಕೇಸರಿ ಅಡ್ಮಿನ್ ಬಳಗ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.