ತುಳುವಿನ ಸಂಸ್ಕೃತಿ, ಸಂಸ್ಕಾರ ಎಲ್ಲಡೆ ಪಸರಿಸಿದಾಗ ತುಳು ಭಾಷೆ ವಿಶ್ವಮಾನ್ಯ: ಡಾ| ಸದಾನಂದ ಪೆರ್ಲ

aladangady lions club copyತುಳುಕೂಟ ಕಾರ್ಯಕ್ರಮ

ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ಕಾರ್ಯಕ್ರಮ ಉದ್ಘಾಟಿಸಿದರು.

ತುಳುವಿಗರಲ್ಲಿ ಬಹಳಷ್ಟು ಪ್ರತಿಭೆಗಳಿದ್ದಾರೆ. ಇದಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸುವ ಗುರು, ತುಳು ಸಮಾಜದವರು ಕಾರಣ. ಇತ್ತೀಚಿನ ದಿನಗಳಲ್ಲಿ ತುಳುಚಿತ್ರ ರಂಗದಲ್ಲಿ ತುಳುವಿಗರಿಗೆ ಸಾಕಷ್ಟು ಅವಕಾಶಗಳಿವೆ. ಪರಶುರಾಮ ಸೃಷ್ಟಿಯ ತುಳುನಾಡು ಸಾಧಕರ ನೆಲೆವೀಡಾಗಿದೆ. – ಪೂರ್ವಿ ಕೆ. ರಾವ್, ಬಾಲನಟಿ

ದೈವ-ದೇವರ ನಂಬಿಕೆಯಲ್ಲಿ ಬದಲಾವಣೆ ಸಲ್ಲದು. ಹಿಂದಿನ ನಂಬಿಕೆಗಳ ಆಚರಣೆಗೆ ವೈಜ್ಞಾನಿಕ ಕಾರಣಗಳಿವೆ. ಇಂತಹ ಕಾರ್ಯಕ್ರಮಗಳಿಂದ ಆಟಿ ತಿಂಗಳ ಹಾಗೂ ತುಳುವಿನ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಾಧ್ಯ.          – ಪಿ.ಎಚ್. ಪ್ರಕಾಶ್ ಶೆಟ್ಟಿ, ನೊಚ್ಚ

  ಅಳದಂಗಡಿ: ಪ್ರತಿಯೊಂದು ಕ್ಷೇತ್ರದ ಸಾಧಕರಲ್ಲೂ ತುಳುವಿಗರಿದ್ದಾರೆ. ತುಳುವಿನಲ್ಲಿ ವಿಚಾರ ಇದೆ. ಆದರೆ ಆಚಾರದಲ್ಲಿ ನಾವು ಹಿನ್ನಡೆಯಲ್ಲಿದ್ದೇವೆ. ತುಳುವಿನ ವಿಚಾರವನ್ನು ಆಚರಣೆಯಲ್ಲಿ ಮೈಗೂಡಿಸಿಕೊಳ್ಳುವಂತಾಗಬೇಕು. ತುಳುವಿನ ಸಂಸ್ಕೃತಿ, ಸಂಸ್ಕಾರ ಎಲ್ಲಡೆ ಫಸರಿಸಿದಾಗ ತುಳು ಭಾಷೆ ವಿಶ್ವಮಾನ್ಯ ಆಗಲು ಸಾಧ್ಯ ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ| ಸದಾನಂದ ಪೆರ್ಲ ಹೇಳಿದರು.
ಅವರು ಆ. 13 ರಂದು ಲಯನ್ಸ್ ಕ್ಲಬ್ ಅಳದಂಗಡಿ ಮತ್ತು ಆಮಂತ್ರಣ ಪತ್ರಿಕೆ, ಶ್ರೀ ಸತ್ಯದೇವತೆ ದೈವಸ್ಥಾನ ಅಳದಂಗಡಿ ಆಶ್ರಯದಲ್ಲಿ ಅಳದಂಗಡಿ ಗ್ರಾ.ಪಂ. ಹಾಗೂ ಅಳದಂಗಡಿ ಪ.ಪೂ. ಕಾಲೇಜಿನ ಎನ್ನೆಸ್ಸೆಸ್ ಘಟಕದ ಸಹಭಾಗಿತ್ವದಲ್ಲಿ ಅಳದಂಗಡಿ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಜರಗಿದ ತುಳುಕೂಟ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ತುಳುವಿನ ಆಚರಣೆಗಳು ನಿತ್ಯ ನಿರಂತರವಾಗಬೇಕು. ಈ ಮೂಲಕ ಮಕ್ಕಳಿಗೆ ಇದರ ಮಹತ್ವ ತಿಳಿಯಬೇಕು. ತುಳು ಭಾಷೆಯಲ್ಲಿ ಆಚಾರ-ವಿಚಾರ ಒಳಗೊಂಡಿದ್ದು, ಇದಕ್ಕೆ ಒಗ್ಗೂಡಿಸುವ ಶಕ್ತಿ ಇದೆ ಎಂದರು.
ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪಿ.ಎಚ್. ಪ್ರಕಾಶ್ ಶೆಟ್ಟಿ ಮಾತನಾಡಿ, ತುಳುವರು ತೀರಾ ಮೃದು ಸ್ವಭಾವದವರು. ತುಳುವಿಗೆ ೮ನೇ ಪರಿಚ್ಛೇದಲ್ಲಿ ಮಾನ್ಯತೆ ದೊರೆಯಬೇಕು. ತುಳು ಭಾಷೆ ಬಗ್ಗೆ ಅಪನಂಬಿಕೆಗಳು ಬೇಡ. ಆದರೆ ಮೂಡನಂಬಿಕೆಗೆ ಬಲಿಯಾಗಬೇಡಿ. ತುಳುವಿನ ಆಚರಣೆ ಬದುಕಿಗೆ ಅಡಿಪಾಯ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ನೆರವೇರಿಸಿದರು. ಅಳದಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಮಾರ್, ಅಳದಂಗಡಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಬಿ.ಆರ್. ಶೆಟ್ಟಿ, ಅಳದಂಗಡಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಯಶೋಧರ ಸುವರ್ಣ ಉಪಸ್ಥಿತರಿದ್ದರು.
ಸಮ್ಮಾನ: ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ| ಸದಾನಂದ ಪೆರ್ಲ, ಲಯನ್ಸ್ ಕ್ಲಬ್‌ನ ರಾಯಬಾರಿ ಪ್ರವೀಣ್ ಕುಮಾರ್ ಇಂದ್ರ, ತುಳುಚಿತ್ರ ನಿರ್ಮಾಪಕ ಹರೀಶ್ ರಾವ್, ಚಿತ್ರನಟ ಸಂದೀಪ್ ಶೆಟ್ಟಿ, ಯತೀಶ್ ಪೂಜಾರಿ, ಟಿವಿ ನಿರೂಪಕಿ ಸ್ವಾತಿಕೃಷ್ಣ ಆಚಾರ್ಯ, ಬಾಲನಟಿ ಪೂರ್ವಿ ಕೆ. ರಾವ್ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ತುಳು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆಸಲಾಯಿತು. ಅಳದಂಗಡಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಸಹಕರಿಸಿದರು. ಸದಾನಂದ ಪೂಜಾರಿ ಉಂಗಿಲಬೈಲು ಸ್ವಾಗತಿಸಿ ವಿ.ಎಸ್. ಸದಾನಂದ ವಂದಿಸಿದರು. ಅಳದಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಪತ್ರಕರ್ತ ವಿಜಯಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.