ಸಂಯಮದ ಸಾಧನೆಯಿಂದ ಲಕ್ಷ್ಮಿಯ ಒಲುಮೆ: ಹೇಮಾವತಿ ಹೆಗ್ಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

kanyadi varamahalakshmi pooje 1 copyಕನ್ಯಾಡಿ  ವರಮಹಾಲಕ್ಷ್ಮೀ
ಪೂಜಾ ದಶಮಾನೋತ್ಸವ

ಧರ್ಮಸ್ಥಳ : ಅಷ್ಟ ಲಕ್ಷ್ಮೀಯರೊಂ ದಾಗಿ ವರಮಹಾಲಕ್ಷ್ಮೀ ಕೇವಲ ಐಶ್ವರ್ಯ ಮಾತ್ರವಲ್ಲ, ಉತ್ತಮ ಆರೋಗ್ಯ, ಮಕ್ಕಳು, ಭೂಮಿ, ಕೃಷಿ, ಜ್ಞಾನ ಎಲ್ಲವನ್ನೂ ಅನುಗ್ರಹಿಸುವವಳು. ಸಂಯಮದ ಸಾಧನೆ; ಪುರುಷಾರ್ಥವಿದ್ದವರಿಗೆ ಲಕ್ಷ್ಮಿ ಸುಲಭದಲ್ಲಿ ಒಲಿಯುತ್ತಾಳೆ. ಲಕ್ಷ್ಮೀ ರಕ್ತದ ಹಾಗೆ ಸದಾ ಹರಿಯುತ್ತಿರಬೇಕು. ಹಣ ವಿನಿಯೋಗವಾದಾಗ ಮಾತ್ರ ಲಕ್ಷ್ಮೀಗೆ ಬೆಲೆ ಬರುತ್ತದೆ, ಇಲ್ಲದಿದ್ದರೆ ಸಂಸಾರವೆಂಬ ನೌಕೆ ಸಾಗರದಲ್ಲಿ ಮುಳುಗುತ್ತದೆ ಎಂದು ಧರ್ಮಸ್ಥಳದ ಹೇಮಾವತಿ ಹೆಗ್ಗಡೆ ನುಡಿದರು.
ಅವರು ಅ. 12 ರಂದು ಧರ್ಮಸ್ಥಳ ಗ್ರಾಮದ ಕನ್ಯಾಡಿ ಶಾಲಾ ಸಭಾಭವನದಲ್ಲಿ ಸೇವಾ ಭಾರತಿಯ ವಿಭಾಗವಾದ ಶ್ರೀ ದುರ್ಗಾ ಮಾತೃ ಮಂಡಳಿಯ ವತಿಯಿಂದ ನಡೆದ ವರಮಹಾಲಕ್ಷ್ಮೀ ಪೂಜೆಯ ದಶಮಾನೋತ್ಸವ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ಹೃದಯ ವಿಶಾಲವಾಗಿದ್ದರೆ ಲಕ್ಷ್ಮೀಯನ್ನು ಒಳ್ಳೆಯ ರೀತಿಯಲ್ಲಿ ಬರಮಾಡಿಕೊಳ್ಳಬಹುದು. ಸತ್ಸಂಗದಿಂದ ಒಳ್ಳೆಯ ವಿಚಾರ ಕೇಳಿದರೆ ದೇಹ ಪುಷ್ಠಿಯಾಗಿರುವುದು. ನಾನು ಎಂಬುದನ್ನು ಬಿಟ್ಟು ಮಾಡಿದ ಸೇವೆ ದೇವರಿಗೆ ತಲುಪುತ್ತದೆ ಎಂದರು. ಅವರು ಸಮಿತಿ ವತಿಯಿಂದ ವಿಶೇಷ ಸಾಧಕರಾದ ಶಾಂತಾ ಪಡ್ವೆಟ್ನಾಯ, ಗಿರಿಜಾ ಬಜಿಲ, ವನಜಾ ಕನ್ಯಾಡಿ, ಕಲ್ಯಾಣಿ ದೊಂಡೋಲೆ, ಹೊನ್ನಮ್ಮ ಮುಳಿಕ್ಕಾರ, ಕಮಲ ಮುಳಿಕ್ಕಾರ, ವಸಂತಿ ಗೌಡ ದೊಂಡೋಲೆ ಮತ್ತು ಜಾನಕಿ ಬರಮೇಲು ಅವರನ್ನು ಸನ್ಮಾನಿಸಿ ಗೌರವಿಸಿದರು.
ಆಶೀರ್ವಚನಗೈದ ಕನ್ಯಾಡಿ ಶ್ರೀ ರಾಮಕ್ಷೇತ್ರದ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭಗವಂತನನ್ನು ಸೇರಲು ಸತ್ಯ ಮತ್ತು ಧರ್ಮ ಬೇಕು.
ಸತ್ಕರ್ಮ ಮತ್ತು ಸದ್ಧರ್ಮದಿಂದ ಮಾತ್ರ ದೇವರನ್ನು ಒಲಿಸಿಕೊಳ್ಳಬಹುದು. ಭಕ್ತಿ, ಶ್ರದ್ಧೆ, ನಿಷ್ಠೆಯಿಂದ ಮಾಡಿದ ಸೇವೆಯಿಂದ ಅಷ್ಟಲಕ್ಷ್ಮೀಯನ್ನು ಒಲಿಸಿಕೊಂಡು ಬದುಕಿನಲ್ಲಿ ಸಾಫಲ್ಯ ಪಡೆಯಬಹುದೆಂದರು. ಸೇವಾ ಭಾರತಿ ಅಧ್ಯಕ್ಷರಾದ ಕೃಷ್ಣಪ್ಪ ಗುಡಿಗಾರ್ ಅಧ್ಯಕ್ಷತೆ ವಹಿಸಿದ್ದರು.
ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಸ್ವರ್ಣಗೌರಿ ಪ್ರಸ್ತಾಪಿಸಿದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಭುಜಬಲಿ ಧರ್ಮಸ್ಥಳ ಸ್ವಾಗತಿಸಿ; ಕಾರ್ಯದರ್ಶಿ ಹರೀಶ್ ರಾವ್ ಮುಂಡ್ರುಪ್ಪಾಡಿ ವಂದಿಸಿದರು. ಎ.ಎಸ್.ಲೋಕೇಶ್ ಶೆಟ್ಟಿ ಮತ್ತು ವಿನಾಯಕ ಕನ್ಯಾಡಿ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.