ಆ.21ರ ವರೆಗೆ ಲಾಯಿಲ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ – ಆಂಜನೇಯ ದೇವರ ಪ್ರತಿಷ್ಠೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

laila 1

222

111ಲಾಯಿಲ ರಾಘವೇಂದ್ರ ಮಠದಲ್ಲಿ ಆ.17ರಿಂದ 21ರ ವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮತ್ತು ಶ್ರೀ ಆಂಜನೇಯ ದೇವರ ಪ್ರತಿಷ್ಠಾ ಕಾರ್ಯಕ್ರಮಗಳು ಜರಗಲಿರುವುದು.
ಆ.18ರಂದು ಶ್ರೀ ಆಂಜನೇಯ ದೇವರ ಪ್ರತಿಷ್ಠೆ ಕಾರ್ಯಕ್ರಮ ಜರಗಿದ ನಂತರ ಸಭಾ ಕಾರ್ಯಕ್ರಮ ಜರಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಕೆ ವಸಂತ ಬಂಗೇರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಉದ್ಯಮಿ ಹನುಮೇಗೌಡರು, ನಾರಾಯಣ ಬೇಗೂರು, ಬಿ.ಎಂ.ಟಿ.ಎಫ್ ಬೆಂಗಳೂರು ತಹಶೀಲ್ದಾರರಾದ ಆರ್ ಗೋವಿಂದ ರಾಜ್, ಉದ್ಯಮಿ ಉಮೇಶ್ ಬಿ ಹೆರಾಜೆ ಭಾಗವಹಿಸಲಿದ್ದಾರೆ. ರಾತ್ರಿ ಬೆಳ್ತಂಗಡಿ ಕಲಾನಿಕೇತನ ನಾಟ್ಯಶಾಲೆ ವಿದ್ಯಾರ್ಥಿಗಳಿಂದ ಭರತನಾಟ್ಯ ಜರಗಲಿದೆ.
ಆ.೧೯ರಂದು ಆರಾಧನಾ ಮಹೋತ್ಸವ ಉದ್ಘಾಟನೆಗೊಳ್ಳಲಿದೆ. ಬೆಳ್ತಂಗಡಿ ಚಿಕಿತ್ಸಾ ಫಾರ್ಮನ ಮಾಲಕರಾದ ಶ್ರೀಶ ಇವರು ಉದ್ಘಾಟನೆ ಮಾಡಲಿರುವರು. ಜಿ.ಪಂ. ಸದಸ್ಯೆ ಶ್ರೀಮತಿ ಸೌಮ್ಯಲತಾ, ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮಾಲ್ಹಕರಾದ ಮೋಹನ ಚೌಧರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಸರಪಾಡಿ ಅಶೋಕ್ ಶೆಟ್ಟಿಯವರ ಸಾರಥ್ಯದಲ್ಲಿ ಯಕ್ಷ-ಹಾಸ್ಯ-ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಆ.೨೦ರಂದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಬಿ. ಪೀತಾಂಬರ ಹೆರಾಜೆ, ಉಜಿರೆ ದೇವಸ್ಥಾನ ಅನುವಂಶೀಯ ಆಡಳಿತ ಮೊಕ್ತೇಸರರಾದ ಯು. ವಿಜಯರಾಘವ ಪಡ್ವೆಟ್ನಾಯ ಆಶೀವರ್ಚನ ಮಾಡಲಿದ್ದಾರೆ. ಉಡುಪಿ ಉದ್ಯಮಿ ಗೋಪಾಲ ಬಂಗೇರ, ಮುಂಬಯಿ ಉದ್ಯಮಿಗಳಾದ ಸುರೇಶ ಕೆ. ಪೂಜಾರಿ, ಸತೀಶ್ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಶ್ರುತಿ ಸಂತೋಷ್ ಬಳಗದವರಿಂದ ನೃತ್ಯ ಜರಗಲಿದೆ. ಉತ್ಸವ ಸಂದರ್ಭದಲ್ಲಿ ಪ್ರತಿದಿನ ಭಜನೆ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ ಜರಗಲಿದೆ ಎಂದು ಗೌರವಾಧ್ಯಕ್ಷರಾದ ಪಿತಾಂಬರ ಹೆರಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.