HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವ್ಯವಹಾರ ಜ್ಞಾನದಿಂದ ವ್ಯಕ್ತಿತ್ವದಲ್ಲಿ ಬದಲಾವಣೆ : ಡಾ. ಹೆಗ್ಗಡೆ

Munduru varamahalakshmi pooje copyಮುಂಡೂರು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

  ಮುಂಡೂರು : ಮನೆಯ ಗೃಹಲಕ್ಷ್ಮೀಯೇ ನಿಜವಾದ ಲಕ್ಷ್ಮೀಯಾಗಿದ್ದಾರೆ. ಮನೆಯ ಎಲ್ಲರ ಜವಾಬ್ದಾರಿ, ರಕ್ಷಣೆ, ಆರೋಗ್ಯ ಸೇರಿದಂತೆ ಕುಟುಂಬದ ಆಗು-ಹೋಗುವಿನಲ್ಲಿ ಅವರ ಪ್ರಮುಖ ಪಾತ್ರವಿದೆ ಪ್ರೀತಿ, ಗೌರವದಿಂದ ಇದನ್ನು ಮಾಡುತ್ತಾಳೆ. ನಮ್ಮ ಸಂಸ್ಕೃತಿಯನ್ನು ರಕ್ಷಿಸುವುದೇ ತಾಯಿ. ತಾಯಿಗೆ ಸಂಸಾರದ ಸಂಸ್ಕೃತಿ ಗೊತ್ತಿದೆ. ಇಂದು ಎಲ್ಲಾ ವ್ಯವಹಾರ ಜ್ಞಾನವನ್ನು ಬೆಳೆಸಿಕೊಂಡಿರುವ ಮಹಿಳೆಯರ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂಡೂರು, ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಮುಂಡೂರು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮುಂಡೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ವರ ಮಹಾಲಕ್ಷ್ಮೀ ಪೂಜೆ ಮತ್ತು ಧಾರ್ಮಿಕ ಸಭೆ ಆ.12ರಂದು ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ನಂತರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ಜಾರಿಯಾದ ನಂತರ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಲ್ಲಿ ಬಹಳಷ್ಟು ಪರಿವರ್ತನೆಗಳಾಗಿದೆ. ಅವರಲ್ಲಿ ವ್ಯವಹಾರ ಜ್ಞಾನ ಬೆಳೆದಿದ್ದು ಕುಟುಂಬ ನಿರ್ವಹಣೆಯಲ್ಲಿ ಪ್ರಧಾನ ಪಾತ್ರವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿ ಸಿದ್ದ ಶ್ರೀ ಧ.ಮಂ. ಕಾಲೇಜು ಉಜಿರೆಯ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಶಕುಂತಳಾ ಬಿ. ಅವರು ವರ ಮಹಾಲಕ್ಷ್ಮೀ ಪೂಜೆಯ ಮಹತ್ವವನ್ನು ವಿವರಿಸಿ, ನಾವು ದೇವಸ್ಥಾನಕ್ಕೆ ಆಗಾಗ ಹೋಗಬೇಕು. ದೇವಸ್ಥಾನದಲ್ಲಿ ಧನಾತ್ಮಕ ತರಂಗಗಳಿದ್ದು, ಅದು ನಮ್ಮ ದೇಹದ ಮೇಲೆ ಪರಿಣಾಮ ಬೀರಿ ನಮ್ಮಲ್ಲಿರುವ ಋಣಾತ್ಮಕ ಶಕ್ತಿಯನ್ನು ದೂರ ಮಾಡಿ ಧನಾತ್ಮಕ ಶಕ್ತಿಯನ್ನು ಪ್ರೇರೆಪಿಸುತ್ತದೆ. ಇದರಿಂದ ನಮ್ಮಲ್ಲಿ ಏಕಾಗ್ರತೆ, ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿದರು.

ಧಾರ್ಮಿಕತೆ ಮತ್ತು ಭಕ್ತಿ ಮನುಷ್ಯನಿಗೆ ಅಗತ್ಯ, ಇಂದು ಸಮಾಜದಲ್ಲಿ ಅರಾಜಕತೆ, ಭಯೋತ್ಪಾದನೆ, ಅಶಾಂತಿ ನಿರ್ಮಿಸುವವರು ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸದಿರುವುದೇ ಕಾರಣವಾಗಿದೆ ಎಂದರು.
ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ರೇವತಿ ಬಿ. ಅವರು ಮಾತನಾಡಿ ಮುಂಡೂರಿನಲ್ಲಿ ಪ್ರಥಮ ಬಾರಿಗೆ ನಡೆದ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಮಹೇಶ್‌ಕುಮಾರ್ ನಡಕ್ಕರ ಉಪಸ್ಥಿತರಿದ್ದರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಎಂ.ಎಂ. ದಯಾಕರ್ ಸ್ವಾಗತಿಸಿದರು. ಸೇವಾಪ್ರತಿನಿಧಿ ಭಾರತಿ ವರದಿ ವಾಚಿಸಿ, ಮುಂಡೂರು ಒಕ್ಕೂಟ ವ್ಯಾಪ್ತಿಯಲ್ಲಿ ೯೪ ಪ್ರಗತಿ ಬಂಧು ತಂಡಗಳು ಕಾರ್ಯನಿರ್ವಹಿಸುತ್ತಿದ್ದು, 2656 ಕುಟುಂಬಗಳ 3611 ಸದಸ್ಯರಿದ್ದಾರೆ. ಒಟ್ಟು 2.50 ಕೋಟಿ ಉಳಿತಾಯವಿದ್ದು, 7.32 ಕೋಟಿ ಸಾಲ ನೀಡಲಾಗಿದೆ ಎಂದು ವಿವರಿಸಿದರು.
ಯೋಜನಾಧಿಕಾರಿ ರೂಪ ಜೈನ್, ದೇವಸ್ಥಾನದ ಆಡಳಿತಾಧಿಕಾರಿ ಮೋಹನ್ ಬಂಗೇರ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿನ್ನಪ್ಪ ಬಂಗೇರ, ವರಮಹಾಲಕ್ಷ್ಮೀ ಪೂಜಾ ಸಮಿತಿ ಕಾರ್ಯದರ್ಶಿ ಅನಿತಾ, ಕೋಶಾಧಿಕಾರಿ ಶಶಿಕಲಾ, ರಾಜೀವ್ ಸಾಲ್ಯಾನ್, ರಮಾನಂದ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು. ಮೇಲ್ವಿಚಾರಕ ಸುರೇಶ್ ಗೌಡ ಎಸ್. ಕಾರ್ಯಕ್ರಮ ನಿರೂಪಿಸಿದರು. ಚಾಮರಾಜ ಜೈನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.