HomePage_Banner_
HomePage_Banner_

ಶಿಕ್ಷಣ ಕೊಡದ ಹೆತ್ತವರೇ ಮಕ್ಕಳ ಮೊದಲ ಶತ್ರುಗಳು: ಸಚಿವ ರೈ

Guruvayanakere prowda shale abhinandane 1 copy

Guruvayanakere prowda shale abhinandane copy

Guruvayanakere prowda shala bisiyuta sibbandige abhinandane copy Guruvayanakere prowda shala shikshakarige abhinandane copy

ಗುರುವಾಯನಕೆರೆ ಪ್ರೌಢ ಶಾಲಾ ಶಿಕ್ಷಕರಿಗೆ-ವಿದ್ಯಾರ್ಥಿಗಳಿಗೆ ಅಭಿನಂದನೆ

ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ

ಸಮಾರಂಭದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಶ್ವೇತಾ (608 ಅಂಕ) ರೂ.10ಸಾವಿರ ನಗದು ಬಹುಮಾನ ಕೊಡುಗೆ-ಮುಖ್ಯೋಪಾಧ್ಯಾಯ ಪ್ರಶಾಂತ್ ಎಲ್, ನಿಶ್ಮಿತಾ (600 ಅಂಕ) ರೂ.10ಸಾವಿರ ನಗದು ಬಹುಮಾನ ಕೊಡುಗೆ-ಶಾಲಾ ಸಹ ಶಿಕ್ಷಕರು, ವಿನಯ (592ಅಂಕ) ರೂ.5ಸಾವಿರ ನಗದು ಬಹುಮಾನ ಕೊಡುಗೆ-ಕೊರಗಪ್ಪ ನಾಯ್ಕ್ ಸೆಕ್ಷನ್ ಆಫೀಸರ್ ರಬ್ಬರ್ ಬೋರ್ಡ್ ಶ್ರೀ ರಾಮ ನಿಯಲ ಬದ್ಯಾರ್.
ಕನ್ನಡ, ಹಿಂದಿ, ಗಣಿತ, ಸಮಾಜದಲ್ಲಿ ಅತ್ಯಧಿಕ ಅಂಕ ಪಡೆದವರಿಗೆ ನಗದು ಪುರಸ್ಕಾರವನ್ನು ನೀಡಲಾಯಿತು. ಇದನ್ನು ತಾ.ಪಂ ಸದಸ್ಯ ಗೋಪಿನಾಥ ನಾಯಕ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಜಗನ್ನಾಥ ಬಂಗೇರ ಹೇರಾಜೆ, ಹಿಂದಿ ಶಿಕ್ಷಕಿ ಅನ್ನಮ್ಮ ವಿ.ಯಂ, ಶಾಲಾ ಮುಖ್ಯೋಪಾಧ್ಯಾಯ ಪ್ರಶಾಂತ್, ಸಮಾಜ ಅಧ್ಯಯನ ಶಿಕ್ಷಕಿ ತ್ರಿವೇಣಿ ಇವರು ಕೊಡುಗೆಯಾಗಿ ನೀಡಿದರು. ಕನ್ನಡ, ಇಂಗ್ಲೀಷ್, ಹಿಂದಿ, ವಿಜ್ಞಾನ ವಿಷಯವಾರು ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು. ಕನ್ನಡ ಭಾಷಾ ಶಿಕ್ಷಕಿ ಸುರೇಖಾ, ಆಂಗ್ಲ ಭಾಷಾ ಶಿಕ್ಷಕ ಜಗನ್ನಾಥ್, ಹಿಂದಿ ಶಿಕ್ಷಕಿ ಅನ್ನಮ್ಮ ವಿ.ಯಂ, ವಿಜ್ಞಾನ ಶಿಕ್ಷಕ ಯೋಗೀಶ್ ನಾಯಕ್ ಕೊಡುಗೆ ನೀಡಿದರು.

ಗುರುವಾಯನಕೆರೆ : ಸರ್ವ ಶಿಕ್ಷಣದಿಂದ ಆರಂಭಿಸಿ, ಇಂದಿನ ಮಾಧ್ಯಮಿಕ ಶಿಕ್ಷಣದವರೆಗೆ ಸರಕಾರ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಶಿಕ್ಷಣ ನಮ್ಮಲ್ಲಿ ಶಾಶ್ವತವಾಗಿ ಉಳಿಯುವ ಸಂಪತ್ತು. ಎಲ್ಲಾ ಸೌಲಭ್ಯಗಳಿದ್ದರೂ ಮಕ್ಕಳಿಗೆ ಶಿಕ್ಷಣ ಕೊಡದ ಹೆತ್ತವರೇ ಅವರ ಮೊದಲ ಶತ್ರುಗಳು ಎಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಹೇಳಿದರು.
ಸರಕಾರಿ ಪ್ರೌಢ ಶಾಲೆ ಗುರುವಾಯನಕೆರೆ ಕಳೆದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಸತತವಾಗಿ ೫ನೇ ಬಾರಿ ಶೇ 100 ಫಲಿತಾಂಶವನ್ನು ದಾಖಲಿಸಿದ್ದು, ಇಲ್ಲಿಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ಆ.13ರಂದು ಶಾಲಾ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ರಮಾನಾಥ ರೈ ಅವರು ಶಿಕ್ಷಣದಿಂದ ಸಾಮಾಜಿಕ ಬದಲಾವಣೆಯಾಗಿದ್ದು, ಎಲ್ಲರ ಮನಸ್ಸು ಮಕ್ಕಳ ಮನಸ್ಸಾಗಬೇಕು, ಮಕ್ಕಳ ಮನಸ್ಸೇ ದೇವರ ಮನಸ್ಸು, ನಮ್ಮೊಳಗೆ ಜಾತಿ, ಧರ್ಮದ ವಿಷಯದಲ್ಲಿ ಅವಿಶ್ವಾಸ ಮೂಡಬಾರದು, ಪ್ರಗತಿ ಪರ ಚಿಂತನೆಯಿಂದ ಬಲಿಷ್ಠ ಸಮಾಜ ನಿರ್ಮಾಣವಾಗಬೇಕು ಎಂದು ಕರೆ ನೀಡಿ, ಈ ಶಾಲಾ ಸಭಾ ಭವನ ನಿರ್ಮಾಣಕ್ಕೆ ಶಾಸಕರ ಜೊತೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆಯಿತ್ತರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ಗುರುವಾಯನಕೆರೆಯ ಅಧ್ಯಾಪಕರು, ಪೋಷಕರು, ಮತ್ತು ವಿದ್ಯಾರ್ಥಿಗಳ ಸತತ ಪ್ರಯತ್ನದಿಂದ ಈ ಶಾಲೆ ಐದು ವರ್ಷ ಶೇ. 100 ಫಲಿತಾಂಶ ಬರಲು  ಕಾರಣವಾಗಿದೆ. 82 ವಿದ್ಯಾರ್ಥಿಗಳಲ್ಲಿ 81 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿರುವುದು ರಾಜ್ಯದಲ್ಲೇ ದೊಡ್ಡ ಸಾಧನೆ. ಇಲ್ಲಿಯ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಬ್ಬ, ಹರಿದಿನ, ರಜೆ ಎಂಬುದಿಲ್ಲ. ಪೋಷಕರು ಸಹ ಇದಕ್ಕೆ ಬೆಂಬಲ ನೀಡಿದ್ದಾರೆ. ಅಧ್ಯಾಪಕರ ನಿಷ್ಕಲ್ಮಶ ಪ್ರಯತ್ನದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಶಾಲೆಗೆ ರೂ.20 ಲಕ್ಷದ ಸಭಾ ಭವನ ನಿರ್ಮಾಣದ ಯೋಚನೆಯಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ವಿಷಯವಾರು ಅಂಕ ಪಡೆದವರಿಗೆ ಪುರಸ್ಕಾರ, ಎಲ್ಲಾ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ, ಶಾಲೆಯ ಎಲ್ಲಾ ಶಿಕ್ಷಕರು, ಅಡುಗೆಯವರಿಗೆ ಅಭಿನಂದನೆ, ರ‍್ಯಾಂಕ್ ಪಡೆದ ವಿದ್ಯಾರ್ಥಿ ಸುಶ್ರುತ್‌ಗೆ ಅಭಿನಂದನೆ, ವರ್ಗಾವಣೆಗೊಂಡ ದ್ವಿತೀಯ ದರ್ಜೆ ಸಹಾಯಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಪ್ರೋತ್ಸಾಹಿಸುತ್ತಿರುವ ಹಿ.ಪ್ರಾ ಶಾಲಾ ಮುಖ್ಯಸ್ಥರಿಗೆ ಸ್ಮರಣಿಕೆ ನೀಡಲಾಯಿತು.
ಜಿ.ಪಂ. ಸದಸ್ಯೆ ಮಮತಾ ಯಂ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ತಾ.ಪಂ. ಸದಸ್ಯರಾದ ಗೋಪಿನಾಥ ನಾಯಕ್, ಪ್ರವೀಣ್ ಗೌಡ, ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ಸದಸ್ಯೆ ದಯಾ ಮಾಧವ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಬಂಟ್ವಾಳ ಜಿ.ಪಂ ಸದಸ್ಯ ಪದ್ಮಶೇಖರ ಜೈನ್, ಕಾರಿಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿನರಾಜ ಆರಿಗ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ಅಲ್ಪೋನ್ಸ್ ಫ್ರಾಂಕೋ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಗೆ 10 ಎಕ್ರೆ ಜಾಗವಿದ್ದು, ಆಟದ ಮೈದಾನದ ಅವಶ್ಯಕತೆ ಇರುವುದನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದರು. ಶಾಲಾ ಮುಖ್ಯೋಪಾಧ್ಯಾಯ ಪ್ರಶಾಂತ್ ಎಲ್ ಸ್ವಾಗತಿಸಿದರು. ಶಿಕ್ಷಕ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿ, ಯೋಗೀಶ್ ನಾಯಕ್ ವಂದಿಸಿದರು. ನಾರಾಯಣ ರಾವ್ ಸನ್ಮಾನಿತರ ವಿವರ, ಶಿಕ್ಷಕಿ ಸುರೇಖಾ, ಅನ್ನಮ್ಮ ವಿದ್ಯಾರ್ಥಿಗಳ ವಿವರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.