ವಯಸ್ಸಾದವರ ಅಲಕ್ಷ್ಯ ಮಾಡಿದರೆ ಶಿಕ್ಷೆಯೇನು ಗೊತ್ತಾ?

  ಜಗತ್ತಿನಲ್ಲಿ ತಂದೆ, ತಾಯಿಯ ಜೊತೆಗಿನ ಸಂಬಂಧವೇ ಎಲ್ಲಕ್ಕಿಂತ ಶ್ರೇಷ್ಠವಾದದ್ದು ಎಂಬ ಮಾತಿದೆ. ಆದರೆ ಈ ಮಾತು ಈಗಿನ ಕಾಲದ ಹಲವರಿಗೆ ಅನ್ವಯವಾಗುವುದಿಲ್ಲ. ಏಕೆಂದರೆ ಈಗ ವಯಸ್ಸಾದ ತಂದೆ, ತಾಯಿಯ ಬಗ್ಗೆ ನಿರ್ಲಕ್ಷ್ಯ ತೋರುವವರೇ ಹೆಚ್ಚು , ತಂದೆ, ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳದ ಮಕ್ಕಳಿಗೆ ಚೀನಾದ ಈ ಊರು ಒಳ್ಳೆಯ ಪಾಠ ಕಲಿಸುತ್ತದೆ. ಚೀನಾದ ಒಂದು ಚಿಕ್ಕ ಹಳ್ಳಿ ಹುವಾಂಗ್ ಫೆಂಗ್, ಈ ಊರಿನ ಜನರು ತಂದೆ, ತಾಯಿ ವಿರುದ್ಧ ನಿಲ್ಲಲು ಅಥವಾ ಅವರನ್ನು ಅಲಕ್ಷ ಮಾಡಲು ಹೆದರುತ್ತಾರೆ. ಇದಕ್ಕೆ ಕಾರಣ ಅಲ್ಲಿನ ಶಿಕ್ಷೆ . ಶಿಕ್ಷೆ ಎಂದರೆ ದೈಹಿಕವಾಗಿ ದಂಡಿಸುವುದಲ್ಲ. ಯಾರು ವಯಸ್ಸಾದ ತಂದೆ, ತಾಯಿಯನ್ನು ಪ್ರೀತಿಯಿಂದ ಕಾಣುವುದಿಲ್ಲವೋ ಅವರ ಹೆಸರು, ಮಾಹಿತಿ, ಭಾವಚಿತ್ರ, ಅವರ ನಡವಳಿಕೆ ಈ ಎಲ್ಲ ವಿವರಗಳೂ ಸಾರ್ವಜನಿಕವಾಗಿ ಬೋರ್ಡ್‌ನಲ್ಲಿ ರಾರಾಜಿಸುತ್ತೆ ಅಷ್ಟೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.