ಹಾಲುಕುಡಿಯದ ಹಾವಿಗೆ ಹಾಲು ಎಂಬ ಮೂಢನಂಬಿಕೆ ವಿಪರ್ಯಾಸ: ಹರಿದಾಸ್ ಎಸ್.ಎಂ

Advt_NewsUnder_1
Advt_NewsUnder_1
Advt_NewsUnder_1

CPIM nagara panchami copyರೋಗಿಗಳಿಗೆ ಹಾಲು ಕೊಟ್ಟು ವಿಶಿಷ್ಠ ರೀತಿಯಲ್ಲಿ ನಾಗರ ಪಂಚಮಿ ಆಚರಣೆ

ಬೆಳ್ತಂಗಡಿ : ನಾಗರ ಪಂಚಮಿಯ ಹೆಸರಿನಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ಹಾಲು ಕುಡಿಯದ ಹಾವಿಗೆರೆಯುವುದರ ಬದಲು ಅಸಕ್ತ ರೋಗಿಗಳಿಗೆ ನೀಡುವುದು ಉತ್ತಮ. ಹಾವಿಗೆ ಹಾಲು ಕುಡಿಸುವಂತದ್ದು ವಿಕೃತ ಮೂಢನಂಬಿಕೆ. ವೈಜ್ಞಾನಿಕ ಯುಗದಲ್ಲೂ ಈ ರೀತಿಯ ಮೂಢನಂಬಿಕೆಗಳು ನಮ್ಮ ಮಧ್ಯೆ ಉನ್ನತ ಸ್ಥಾನ ಪಡೆಯುತ್ತಿರುವುದು ವಿಪರ್ಯಾಸ ಎಂದು ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಹರಿದಾಸ್ ಎಸ್.ಎಂ. ಹೇಳಿದರು.
ಆ.7 ರ ನಾಗರ ಪಂಚಮಿಯಂದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಾಗೂ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಬಿಸಿ ಹಾಲು ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ನಿರ್ದೇಶಕರಾದ ಶಿವಕುಮಾರ್ ಎಸ್.ಎಂ, ಸುಕನ್ಯಾ ಹೆಚ್, ಸುಜೀತ್, ಶೇಖರ ಎಲ್, ಮಹಿಳಾ ಸಂಘಟನೆಯ ಸುಧಾ ಕೆ. ರಾವ್, ಪದ್ಮಾವತಿ, ರೂಪ ಶೆಟ್ಟಿ, ಆಶಾ ಸುಜೀತ್, ಕೃಷಿ ಕೂಲಿಕಾರರ ಸಂಘದ ಅನಿಲ್ ಎಂ , ಡಿವೈಎಫ್‌ಐ ಬೆಳ್ತಂಗಡಿ ನಗರ ಸಮಿತಿಯ ಸುಹಾಸ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.