ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷರಾಗಿ ಜೇಸಿ ಸಂಪತ್ ಬಿ. ಸುವರ್ಣ

sampath copy  ಬೆಳ್ತಂಗಡಿ : ಭಾರತೀಯ ಜನತಾ ಪಾರ್ಟಿಯ ತಾಲೂಕು ಯುವ ಮೋರ್ಚಾದ ಅಧ್ಯಕ್ಷರಾಗಿ ಯುವ ಉದ್ಯಮಿ, ಜೇಸಿಐ ರಾಷ್ಟ್ರೀಯ ನಿರ್ದೇಶಕರಾಗಿದ್ದ ಜೇಸಿ ಸಂಪತ್ ಸುವರ್ಣ ಅವರನ್ನು ನೇಮಕಗೊಳಿಸಿ ಪಕ್ಷದಿಂದ ಅಧಿಕೃತ ಆದೇಶ ಬಿಡುಗಡೆಗೊಳಿಸಲಾಗಿದೆ.
ಆ. 6 ರಂದು ಗುರುವಾಯನಕೆರೆ “ನಮ್ಮ ಮನೆ” ಹವ್ಯಕ ಭವನದಲ್ಲಿ ನಡೆದ ಬಿಜೆಪಿ ತಾಲೂಕು ಸಮಿತಿ ನೂತನ ಪದಾಧಿಕಾರಿಗಳ ಪ್ರದಗ್ರಹಣ ಸಮಾರಂಭದಲ್ಲಿ ಸಂಪತ್ ಅವರ ಆಯ್ಕೆಯನ್ನು ಪಕ್ಷದ ನಾಯಕರು ಅಧಿಕೃತವಾಗಿ ಘೋಷಿಸಿದರು. ಯುವ ಉದ್ಯಮಿಯಾಗಿರುವ ಸಂಪತ್ ಬಿ ಸುವರ್ಣ ಅವರು ಬೆಳ್ತಂಗಡಿ ಸುವರ್ಣ ಆರ್ಕೆಡ್‌ನ ಮಾಲಕ ವೈ ನಾಣ್ಯಪ್ಪ ಪೂಜಾರಿ ಮತ್ತು ಬೇಬಿ ಸುವರ್ಣ ದಂಪತಿ ಪುತ್ರರಾಗಿದ್ದಾರೆ. ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇದರ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅಂತಾರಾಷ್ಟ್ರೀಯ ವ್ಯಕ್ತಿತ್ವವಿಕಸನ ಸಂಸ್ಥೆ ಜೇಸಿ ಐ ಇದರ ಯುವ ಸಂಘಟನೆಗಾಗಿ ೩ ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಅವರು ದ.ಕ, ಉಡುಪಿ, ಕೊಡಗು, ಉತ್ತರ ಕನ್ನಡ ಜಿಲ್ಲೆಗಳ ವಲಯಾಧ್ಯಕ್ಷರಾಗಿ ಅಪಾರ ಜನಪ್ರೀಯತೆ ಗಳಿಸಿಕೊಂಡವರು. ಈ ವರ್ಷ ರಾಷ್ಟ್ರೀಯ ನಿರ್ದೇಶಕರಾಗಿ ಜೇಸಿ ಸಂಸ್ಥೆಯ ಸದಸ್ಯತ್ವವನ್ನು ಹೊಸ ಎತ್ತರಕ್ಕೆ ಏರಿಸಿ ರಾಷ್ಟ್ರಮಟ್ಟದಲ್ಲಿ ಕರಾವಳಿಯ ಹೆಸರನ್ನು ಮಿನುಗಿಸಿದವರು. ಉಭಯ ಜಿಲ್ಲೆಯಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಅವರು ಸದಾ ಹೊಸತನದಿಂದಲೆ ಸಮಾಜಮುಖಿ ಕೆಲಸ ನಿರ್ವಹಿಸುತ್ತಿರುವ ಅವರು ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯ “ಸ್ವಚ್ಚ ಭಾರತ್ ಅಭಿಯಾನ್” ಕಾರ್ಯಕ್ರಮದನ್ವಯ ರಾಷ್ಟ್ರಾಧ್ಯಂತ ೩ ಸಾವಿರಕ್ಕೂ ಅಧಿಕ ಶೌಚಾಲಯಗಳನ್ನು ಜೇಸಿ ಘಟಕದ ವತಿಯಿಂದ ನಿರ್ಮಿಸುವಲ್ಲಿ ಪ್ರೋತ್ಸಾಹಿಸಿದವರು. ಜೇಸಿಐ ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ರಾಷ್ಟ್ರೀಯ ನಿರ್ದೇಶಕ, ಪೂರ್ವ ವಲಯಾಧ್ಯಕ್ಷ, ಯುವ ಉದ್ಯಮಿಯಾಗಿ ಎಲ್ಲರಿಗೂ ಚಿರಪರಿಚಿತರಾ ಗಿದ್ದಾರೆ. ಇದೀಗ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದ ಅವರು ತನ್ನದೇ ಛಾಪು ಮೂಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.