ಗೋ ಕಳ್ಳತನ, ಅಕ್ರಮ ಸಾಗಾಟ ಆರೋಪಿಗಳಾದ ಆಸಿಫ್, ಹೈದರ್ ಬಂಧನ ಇನ್ನೊರ್ವ ಆರೋಪಿ ಪರಾರಿ

 ಬೆಳ್ತಂಗಡಿ: ಬೇರೆಯವರ ಮನೆಯಿಂದ ಅಕ್ರಮವಾಗಿ ಗೋ ವನ್ನು ಕದ್ದು ಮಾಂಸ ಮಾಡಿ ಮಾರಾಟ ಮಾಡಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತರನ್ನು ಕಿಲ್ಲೂರು ಸನಿಹದ ಕೊಲ್ಲಿಬೆಟ್ಟು ನಿವಾಸಿ ಹೈದರ್ ಕೊಲ್ಲಿಬೆಟ್ಟು( 28ವ.) ಮತ್ತು ಆಸಿಫ್ ಕೊಲ್ಲಿಬೆಟ್ಟು( 23ವ.) ಎಂಬವರೆಂದು ಗುರುತಿಸಲಾಗಿದೆ. ಇನ್ನೊರ್ವ ಆರೋಪಿ ಅಶ್ರಫ್ ಪರಾರಿಯಾಗಿದ್ದಾರೆ.
ಬೆಳ್ತಂಗಡಿ ಠಾಣಾ ಪ್ರಭಾರ ಎಸ್.ಐ ಮಧು ಅವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಪ್ರಕರಣ ಬಯಲಿಗೆ ಬಂದಿದ್ದು ಆರೋಪಿಗಳನ್ನು ಪೊಲೀಸ್ ಕಷ್ಟಡಿಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಅವರು ಆರೋಪವನ್ನು ಒಪ್ಪಿಕೊಂಡಿದ್ದಾರೆ. ಅವರ ಈ ಕೃತ್ಯದಲ್ಲಿ ಇನ್ನೊಂದು ಸಂಪರ್ಕ ಜಾಲ ಕೂಡ ಇರುವ ಶಂಕೆ ಇದ್ದು ಕಳವುಗೈಯುತ್ತಿದ್ದ ಗೂವುಗಳನ್ನು ಇವರಿಗೆ ಆ ತಂಡ ಹಸ್ತಾಂತರಿಸುತ್ತಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಇದೀಗ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಅವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಕ್ರಮ ವಹಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.