HomePage_Banner_
HomePage_Banner_
HomePage_Banner_

ಹನ್ನೆರಡುಕವಲು: ನದಿಯಲ್ಲಿ ಮುಳುಗಿದ್ದ ಇಬ್ಬರ ಮೃತದೇಹ ಪತ್ತೆ

vnr 1

vnr 2

vnr 3

vnr

ಆರಂಬೋಡಿ: ಆ.6ರ ಬೆಳಿಗ್ಗೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಆರಂಬೋಡಿ ಗ್ರಾಮದ ಹನ್ನೆರಡುಕವಲು ಫಲ್ಗುಣಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಇಬ್ಬರ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ಆರಂಬೋಡಿ ಹನ್ನೆರಡಲು ಕವಲು ನಿವಾಸಿ ವಸಂತ ಶೆಟ್ಟಿ (58) ಹಾಗೂ ತಾಕೊಡೆ ನಿವಾಸಿ ಚಾರ್ಲಿ (55) ಮೃತಪಟ್ಟವರು.
ಬಂಟ್ವಾಳ ಅಗ್ನಿಶಾಮಕ ದಳದ ಠಾಣಾಧಿಕಾರಿ ಎಚ್. ಸುಂದರ, ಸಿಬ್ಬಂದಿಗಳಾದ ಮಹಮ್ಮದ್ ಗೌನ್, ರಾಜೇಶ್, ರೋಹಿತ್, ಮಹಮ್ಮದ್ ರಫೀಕ್ ಮೂಡಬಿದಿರೆ ಅಗ್ನಿಶಾಮಕ ಠಾಣಾಧಿಕಾರಿ ಕಿಶೋರ್ ಕುಮಾರ್, ಸಹಾಯಕ ಠಾಣಾಧಿಕಾರಿ ಪ್ರವೀಣ್ ಕುಮಾರ್, ಸಿಬ್ಬಂದಿಗಳಾದ ಕೇಶವ, ಚಂದ್ರಶೇಖರ, ಕೃಷ್ಣ ನಾಯ್ಕ್, ನವೀನ್‌ಚಂದ್ರ, ಉದಯಕುಮಾರ್ ಹೆಗ್ಡೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನಮೂರ್ತಿ, ಮೂಡಬಿದಿರೆ ತಹಶೀಲ್ದಾರ್ ಮಹಮ್ಮದ್ ಇಸಾಕ್, ಪುರಸಭೆ ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಎಚ್. ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ವೇಣೂರು, ಬಂಟ್ವಾಳ ಹಾಗೂ ಮೂಡಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.