ಉಪ ತಹಶೀಲ್ದಾರ್ ಆನಂದ ದಾಮ್ಲೆ ಸೇವಾ ನಿವೃತ್ತಿ

anada damble 1 copyಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಕಳೆದ ಎರಡೂವರೆ ವರ್ಷದಿಂದ ಉಪ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಆನಂದ ದಾಮ್ಲೆ ಅವರು ಜು.30ರಂದು ಸರಕಾರಿ ಸೇವೆಯಿಂದ ನಿವೃತ್ತಿಯಾಗಿದ್ದಾರೆ.
ಬ್ರಹ್ಮಾವರ ತಾಲೂಕು ಏರೂರು ನಿವಾಸಿಯಾಗಿರುವ ಆನಂದ ದಾಮ್ಲೆಯವರು ಕಂದಾಯ ಇಲಾಖೆಯಲ್ಲಿ ಸುಮಾರು ಮೂವತ್ತೆಂಟುವರೆ ವರ್ಷಗಳ ಕಾಲ ಗ್ರಾಮಕರಣಿಕರಾಗಿ, ಕಂದಾಯ ನಿರೀಕ್ಷಕರಾಗಿ, ಉಪತಹಶೀಲ್ದಾರ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಬಂಟ್ವಾಳ, ಕುಂದಾಪುರ, ಉಡುಪಿ, ಬೆಳ್ತಂಗಡಿ ತಾಲೂಕುಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜು.೩೦ರಂದು ಸೇವೆಯಿಂದ ನಿವೃತ್ತರಾದ ಇವರನ್ನು ತಾಲೂಕು ಕಚೇರಿ ವತಿಯಿಂದ ಬೀಳ್ಕೊಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.