ಟೀಚರ‍್ಸ್ ಕೋ ಆಪರೇಟಿವ್ ಬ್ಯಾಂಕ್ ರವೀಂದ್ರ ಶೆಟ್ಟಿ ಬಳಂಜರಿಗೆ ಪದೋನ್ನತಿಗೊಂಡು ಚಿಕ್ಕಮಗಳೂರಿಗೆ ವರ್ಗಾವಣೆ

raveendra shetty ಬೆಳ್ತಂಗಡಿ: ಇಲ್ಲಿನ ಟೀಚರ‍್ಸ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿರುವ ರವೀಂದ್ರ ಶೆಟ್ಟಿ ಬಳೆಂಜ ಅವರಿಗೆ ಮನೇಜರ್ ಹುದ್ದೆಗೆ ಭಡ್ತಿಯಾಗಿದ್ದು 7 ಉಪಶಾಖೆಗಳುಳ್ಳ ಚಿಕ್ಕಮಗಳೂರು ಜಿಲ್ಲಾ ಕೇಂದ್ರದ ಬ್ಯಾಂಕಿಗೆ ವರ್ಗಾವಣೆಯಾಗಿದೆ.
ಮೂಲತಃ ಬಳೆಂಜದವರಾಗಿರುವ ರವೀಂದ್ರ ಶೆಟ್ಟಿ ಅವರು ಪ್ರಸ್ತುತ ಉಜಿರೆಯಲ್ಲಿ ನೆಲೆಸಿದ್ದು, 30 ವರ್ಷಗಳ ವೃತ್ತಿ ಅನುಭವ ಹೊಂದಿ ಕಾರ್ಕಳ, ಉಡುಪಿ, ಬೈಂದೂರು, ಪುತ್ತೂರು, ಸುಳ್ಯ, ಮತ್ತು ಬೆಳ್ತಂಗಡಿ ಶಾಖೆಗಳಲ್ಲಿ ಜವಾಬ್ಧಾರಿ ನಿರ್ವಹಿಸಿದ್ದಾರೆ.
ಉತ್ತಮ ಸಂಘಟಕರೂ ಆಗಿರುವ ಅವರು ಲಯನ್ಸ್ ಕ್ಲಬ್ ಬೆಳ್ತಂಗಡಿಯ ಕೋಶಾಧಿಕಾರಿಯಾಗಿ, ಜೇಸಿಐ ಅಧ್ಯಕ್ಷರಾಗಿ, ವಲಯಾಧಿಕಾರಿಯಾಗಿ, ಬಂಟರ ಸಂಘ ಉಜಿರೆಯ ಪ್ರಸ್ತುತ ಅಧ್ಯಕ್ಷರಾಗಿ, ಉಜಿರೆ ಶ್ರೀ ಗಣೇಶೋತ್ಸವ ಸೇವಾ ಸಮಿತಿ, ಶ್ರೀ ಶಾರದೋತ್ಸವ ಸೇವಾ ಸಮಿತಿ, ಸೇರಿದಂತೆ ಸಾಮಾಜಿಕ ಧಾರ್ಮಿಕವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಉತ್ತಮ ಕಾರ್ಯಕ್ರಮ ಉದ್ಘೋಷಕರೂ ಆಗಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.