ತೋಟತ್ತಾಡಿ ಬಂಡಸಾಲೆ ಮುಹಮ್ಮದ್ ಹಾಜಿಯವರ ಮನೆಯಲ್ಲಿ ಬೆಂಕಿ ಆಕಸ್ಮಿಕ ಅಂದಾಜು 1.50 ಲಕ್ಷ ರೂ. ನಷ್ಟ; ಬಿರುಕುಬಿಟ್ಟ ಮನೆ

benki duranthaತೋಟತ್ತಾಡಿ: ಗ್ರಾಮದ ಬಂಡಸಾಲೆ ನಿವಾಸಿ ಮುಹಮ್ಮದ್ ಹಾಜಿ ಅವರ ಮನೆಯಲ್ಲಿ ಆಕಸ್ಮಿಕ ಅಗ್ನಿ ದುರಂತವಾಗಿದ್ದು ಸುಮಾರು 1.50 ಲಕ್ಷ ರೂ. ನಷ್ಟವಾಗಿದೆ.
ಮುಹಮ್ಮದ್ ಹಾಜಿ ಮನೆಯವರು ಮನೆಗೆ ಬೀಗ ಹಾಕಿ ಸಂಬಂದಿಕರ ಮನೆಗೆ ಹೋಗಿದ್ದರು. ಈ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯುಟ್‌ನಿಂದ ಬೆಂಕಿ ಉಂಟಾಗಿ ಬಳಿಕ ಮನೆಗೆ ಪೂರ್ತಿ ವ್ಯಾಪಸಿರಬಹುದು ಎಂದು ಶಂಕಿಸಲಾಗಿದೆ. ಪೂರ್ತಿ ವಿದ್ಯುತ್ ವ್ಯವಸ್ಥೆ, ಸೋಫಾಸೆಟ್ ಮತ್ತು ಕುರ್ಚಿ ಸೇರಿದಂತೆ ಎಲ್ಲಾ ಪೀಠೋಪಕರಣಗಳು ಹಾಗೂ ಮನೆಯ ಸೊತ್ತುಗಳು ಸುಟ್ಟುಕರಕಲಾಗಿದೆ. ಪಕ್ಕದ ಮನೆಯವರಿಗೆ ವಿಷಯ ತಿಳಿದು ಅವರು ದೂರವಾಣಿ ಮೂಲಕ ಪಕ್ಕದ ಬೆಂದ್ರಾಳದಲ್ಲಿರುವ ಮುಹಮ್ಮದ್ ಅವರ ಪುತ್ರ ಇಬ್ರಾಹಿಂ ಅವರಿಗೆ ದೂರವಾಣಿ ಕರೆಮಾಡಿ ತಿಳಿಸಿದಾಗ ಅವರ ಧಾವಿಸಿ ಬಂದು ಊರವರ ಸಹಕಾರದಿಂದ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರಾದರೂ ಅದಾಗಲೇ ಬಹುತೇಕ ಉರಿದು ಹೋಗಿತ್ತು. ಘಟನೆಯಿಂದ ಮನೆಯ ಗೋಡೆ ಕೂಡ ಬಿರುಕು ಬಿಟ್ಟಿದ್ದು ಸುಮಾರು 1.50 ಲಕ್ಷ ರೂ. ನಷ್ಟ ಉಂಟಾಗಿದೆ.
ಭೇಟಿ:
ಘಟನೆ ನಡೆದ ಮನೆಗೆ ಜಿ.ಪಂ ಸದಸ್ಯೆ ನಮಿತಾ, ನೆರಿಯ ಗ್ರಾ. ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ ಅಶ್ರಫ್(ಟಿಪ್‌ಟಾಪ್ ಟೈಲರ‍್ಸ್ ಕಕ್ಕಿಂಜೆ), ಗ್ರಾ.ಪಂ ಸದಸ್ಯರಾದ ಶಾಜಿ, ಅಬೂಬಕ್ಕರ್, ಗ್ರಾಮಕರಣಿಕ ಅಂಕಿತ್ ಜೈನ್, ಮೊದಲಾದವರು ಭೇಟಿ ನೀಡಿ ಪರಿಹಾರ ವೊದಗಿಸಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.