HomePage_Banner_
HomePage_Banner_
HomePage_Banner_

ಎನ್. ಎ ಗೋಪಾಲ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಪಡ್ಲಾಡಿ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

Advt_NewsUnder_1

padladi pusthaka vitharaneಲಾಯಿಲ: ಎನ್. ಎ ಗೋಪಾಲ ಶೆಟ್ಟಿ ಫ್ಯಾಮಿಲಿ ಟ್ರಸ್ಟ್, ಲಯನ್ಸ್ ಕ್ಲಬ್ ಬೆಳ್ತಂಗಡಿ, ಶಾಲಿನಿ ಶೆಟ್ಟಿ ಸೇವಾ ಪ್ರತಿಷ್ಠಾನ, ಜೇಸಿಐ ಮಂಜುಶ್ರೀ ಮತ್ತು ಪತ್ರಕರ್ತರ ಸಂಘ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಎನ್. ಎ ಗೋಪಾಲ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಲಾಯಿಲ ಗ್ರಾಮದ ಪಡ್ಲಾಡಿ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ವಿತರಣೆಯನ್ನು ಜು. 26 ರಂದು ನಡೆಸಲಾಯಿತು.
ಅಧ್ಯಕ್ಷತೆಯನ್ನು ಜೇಸಿಐ ಮಂಜುಶ್ರೀ ಅಧ್ಯಕ್ಷ ವಸಂತ ಶೆಟ್ಟಿ “ಶ್ರದ್ಧಾ” ವಹಿಸಿದ್ದರು. ಶಾಲಿನಿ ಶೆಟ್ಟಿ ಸೇವಾ ಪ್ರತಿಷ್ಠಾನದ ವತಿಯಿಂದ ಈ ಬಾರಿ ಲೇಖನಿ ಕೊಡುಗೆಯಾಗಿ ನೀಡುತ್ತಾ ಅಧ್ಯಕ್ಷ ಜನಾರ್ದನ ಶೆಟ್ಟಿ ಪೆರಿಂದಿಲೆ ಅತಿಥಿಯಾಗಿದ್ದರು. ಪತ್ರಕರ್ತರ ಸಂಘದ ವತಿಯಿಂದ ಅಶ್ರಫ್ ಆಲಿಕುಂಞಿವರು ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎನ್. ಎ ಗೋಪಾಲ ಶೆಟ್ಟಿ ಅವರ ಪುತ್ರ ದೀಪಕ್ ಜಿ ಶೆಟ್ಟಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಮೇದಿನಿ ಡಿ ಗೌಡ, ಕೋಶಾಧಿಕಾರಿ ಅನಿಲ್ ನಾಯ್ಗ, ಶಾಲಿನಿ ಶೆಟ್ಟಿ ಪ್ರತಿಷ್ಠಾನದ ತಾರನಾಥ ಶೆಟ್ಟಿ, ಸುರೇಶ್ ಶೆಟ್ಟಿ ಲಾಲ, ಕಿರಣ್ ಶೆಟ್ಟಿ, ಗ್ರಾ.ಪಂ ಸದಸ್ಯರಾದ ಆಶಾ ಸಾಲ್ಡಾನಾ ಮತ್ತು ಕೃಷ್ಣಪ್ಪ, ಎಸ್‌ಡಿಎಂಸಿ ಅಧ್ಯಕ್ಷೆ ಜಯಂತಿ ಇವರುಗಳು ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಗಟ್ರೂಡ್ ಸ್ವಾಗತಿಸಿದರು. ಶಿಕ್ಷಕಿ ಸುಧಾ ಆರ್ ರಾವ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.