ಡಾ| ಟಿ.ಎನ್.ತುಳಪುಳೆ ದತ್ತಿನಿಧಿ ಉದ್ಘಾಟನೆ ಮತ್ತು ಉಪನ್ಯಾಸ ಕಾರ್ಯಕ್ರಮ

¸À

¸À¸À

ಉಜಿರೆ :   ಕನ್ನಡ ಸಾಹಿತ್ಯ ಪರಿಷತ್ತು, ದ.ಕ ಜಿಲ್ಲೆ ಬೆಳ್ತಂಗಡಿ ತಾಲೂಕು ಘಟಕ, ಶ್ರೀ.ಧ.ಮಂ.ಕಾಲೇಜು, ಕನ್ನಡ ಸಂಘ ಉಜಿರೆ ಮತ್ತು ಹರಿದಾಸ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಆಶ್ರಯದಲ್ಲಿ ಡಾ| ಟಿ.ಎನ್.ತುಳಪುಳೆ ದತ್ತಿನಿಧಿ ಉದ್ಘಾಟನೆ ಮತ್ತು ಉಪನ್ಯಾಸ ಕಾರ್ಯಕ್ರಮವು ಜು.30ರಂದು ಶ್ರೀ.ಧ.ಮಂ ಕಾಲೇಜು ಸೆಮಿನಾರ್ ಸಭಾಂಗಣದಲ್ಲಿ ಜರಗಿತು.
ದ.ಕ.ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಳ್ತಂಗಡಿ ತಾಲೂಕು ಘಟಕ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಬಿ ಯಶೋವರ್ಮರವರು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾಗಿ ಬೆಳ್ತಂಗಡಿ ಶ್ರೀ ಗುರುದೇವ ಮಹಾವಿದ್ಯಾಲಯ ಪ್ರಾಂಶುಪಾಲರಾದ ಕೃಷ್ಣಪ್ಪ ಪೂಜಾರಿ ಭಾಗಿಯಾಗಿದ್ದರು. ಹಿರಿಯ ಸಾಹಿತಿಯಾದ ಪ್ರೊ| ನಾವುಜಿರೆಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಉಜಿರೆ ಶ್ರೀ.ಧ.ಮಂ ಕಾಲೇಜಿನ ಪ್ರಾಂಶುಪಾಲರು, ಕ.ಸಾ.ಪ ಅಧ್ಯಕ್ಷರು, ಕ.ಸಾ.ಪ.ದ.ಕ.ಜಿಲ್ಲೆ ಅಧ್ಯಕ್ಷರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾ.ಸ.ಪ ಕಾರ್ಯದರ್ಶಿ ರಾಮಕೃಷ್ಣ ಚೊಕ್ಕಾಡಿ ನಿರೂಪಿಸಿ, ಜಿಲ್ಲಾ ಕ.ಸಾ.ಪ ಕಾರ್ಯದರ್ಶಿ ಡಾ| ಎಂ.ಪಿ ಶ್ರೀನಾಥ್ ಸ್ವಾಗತಿಸಿದರು. ಎಸ್.ಡಿ.ಎಂ ಪ್ರಾಧ್ಯಾಪಕ ಡಾ| ಕೆ.ವಿ ನಾಗರಾಜಪ್ಪ ಧನ್ಯವಾದವಿತ್ತರು. ಕ.ಸಾ.ಪ ಕಾರ್ಯದರ್ಶಿ ಅಶ್ರಫ್ ಆಲಿಕುಞ ಸನ್ಮಾನ ಪತ್ರವಾಚನ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.