ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಹಿಂತೆಗೆತ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Belthangady bus copy

 ಬೆಳ್ತಂಗಡಿ : ಜು.25ರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೆಎಸ್‌ಆರ್‌ಟಿಸಿ ನೌಕರರು ನಡೆಸುತ್ತಿ ರುವ ಮುಷ್ಕರವನ್ನು ಜು.೨೭ರಂದು ಸಂಜೆ ಹಿಂತೆಗೆದುಕೊಂಡಿದ್ದಾರೆ.
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಸ್ತೆ ಸಾರಿಗೆ ನೌಕರರು ಮೂರು ದಿನಗಳಿಂದ ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುತ್ತಿದ್ದು, ಸರಕಾರ ಮುಷ್ಕರ ನಿರತರೊಡನೆ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜವಾಗಲಿಲ್ಲ. ಇದರಿಂದಾಗಿ ರಾಜ್ಯಾದ್ಯಂತ ಜನರು ತೀವ್ರ ಸಂಕಷ್ಟ ಸಿಲುಕಿದ್ದು, ಜು.27ರಂದು ಬೆಳ್ತಂಗಡಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜು.25 ಮತ್ತು ಜು.26ರಂದು ನಡೆದ ಕೆಎಸ್‌ಆರ್‌ಟಿಸಿ ನೌಕರರು ನಡೆಸಿದ ಮುಷ್ಕರದಿಂದ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸರಕಾರಿ ಬಸ್ಸುಗಳನ್ನೇ ಅವಲಂಭಿಸಿರುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬಹಳಷ್ಟು ಸಮಸ್ಯೆಯನ್ನು ಎದುರಿಸುವಂತಾಯಿತು.
ಬೆಳ್ತಂಗಡಿ ತಾಲೂಕಿನಲ್ಲಿ ಜು.೨೫ರಿಂದಲೇ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದಾಗಿ ಕಿಲ್ಲೂರು, ಮಲವಂತಿಗೆ, ಕಡಿರುದ್ಯಾವರ, ಮಿತ್ತಬಾಗಿಲು, ದಿಡುಪೆ, ಚಾರ್ಮಾಡಿ, ಗಂಡಿಬಾಗಿಲು, ನೆರಿಯ, ಸವಣಾಲು, ಬೆಳಾಲು, ಕಳೆಂಜ, ಪಟ್ರಮೆ, ಕೊಯ್ಯೂರು, ಕಾಯರ್ತಡ್ಕ, ಪುದುವೆಟ್ಟು, ಮಿಯಾರು, ಕೊಕ್ಕಡ, ಶಿಶಿಲ, ಅರಸಿನಮಕ್ಕಿ, ಶಿಬಾಜೆ, ಮೊದಲಾದ ಗ್ರಾಮೀಣ ಭಾಗಗಳಿಂದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಸರಕಾರಿ ಬಸ್ಸನ್ನೇ ಅವಲಂಬಿಸಿದ್ದು, ಅವರಿಗೆ ಬರಲು ಬಹಳಷ್ಟು ಸಮಸ್ಯೆಯಾಯಿತು. ಪುತ್ತೂರು ವಿಭಾಗೀಯ ಕೇಂದ್ರ ವ್ಯಾಪ್ತಿಗೆ ಒಳಪಟ್ಟ ಧರ್ಮಸ್ಥಳ ಡಿಪ್ಪೋದಿಂದ ತಾಲೂಕಿನಲ್ಲಿ 6,118 ಮಂದಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಲಾಗಿದೆ. ಬಸ್ ಪಾಸ್ ಹೊಂದಿದ ವಿದ್ಯಾರ್ಥಿಗಳಲ್ಲದೆ ಪ್ರತಿನಿತ್ಯ ನಗರ ಪ್ರದೇಶ ಹಾಗೂ ಮಂಗಳೂರು, ಪುತ್ತೂರುಗೆ ಹೋಗುವ ಬಸ್ ಪಾಸ್ ಹೊಂದಿದ ಪ್ರಯಾಣಿಕರು ಬದಲಿ ವ್ಯವಸ್ಥೆಯಿಲ್ಲದೆ ಸಂಕಷ್ಟವನ್ನು ಎದುರಿಸಿದರು.
ನಗರ ಪ್ರದೇಶದಲ್ಲಿ ಖಾಸಗಿ ಬಸ್ಸು, ಟೆಂಪೋ, ಜೀಪು, ರಿಕ್ಷಾ ಮತ್ತು ಇತರ ವಾಹನಗಳ ಹೆಚ್ಚುವರಿ ಓಡಾಟ ನಡೆಸಿದ್ದರಿಂದ ಪ್ರಯಾಣಿಕರಿಗೆ ಹೆಚ್ಚಿನ ಸಮಸ್ಯೆ ಕಾಡಲಿಲ್ಲ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಸರಕಾರಿ ಬಸ್‌ಪಾಸ್ ಹೊಂದಿದ್ದ ವಿದ್ಯಾರ್ಥಿಗಳು ಬಸ್‌ಗಳಿಲ್ಲದೆ ಖಾಸಗಿ ವಾಹನಗಳಲ್ಲಿ ಬಂದು ಶಾಲೆಗೆ ಹಾಜರಾಗಿದ್ದಾರೆ. ಮುಷ್ಕರದ ಹಿನ್ನಲೆಯಲ್ಲಿ ‘ಶಾಲಾ ಕಾಲೇಜುಗಳಿಗೆ ರಜೆ’ ಎಂಬ ಗೊಂದಲದಿಂದಾಗಿ ಕೆಲವಡೆ ವಿದ್ಯಾರ್ಥಿಗಳು ಗೈರು ಹಾಜರಾದ ಘಟನೆಯೂ ನಡೆದಿದೆ.
ಕೆಲ ಖಾಸಗಿ ಶಾಲೆಗಳು ಮಕ್ಕಳಿಗೆ ರಜೆ ನೀಡಿದರೆ, ಇನ್ನಿತರ ಶಾಲೆಗಳಲ್ಲಿ ಬಸ್ ಇಲ್ಲದೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೂರದ ಊರುಗಳಿಂದ ಸರಕಾರಿ ಬಸ್ಸಿನಲ್ಲಿ ಬರುವ ಯಾತ್ರಾರ್ಥಿಗಳಿಗೆ ಸಮಸ್ಯೆ ಎದುರಾಯಿತು. ಸ್ವಂತ ವಾಹನದಲ್ಲಿ ಬಂದವರಿಗೆ ಯಾವುದೇ ಅಡ್ಡಿ ಉಂಟಾಗಲಿಲ್ಲ. ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗೀಯ ಕೇಂದ್ರ ವ್ಯಾಪ್ತಿಗೆ ಒಳಪಟ್ಟ ಧರ್ಮಸ್ಥಳ ಡಿಪ್ಪೋದಲ್ಲಿ ೫೧೧ ಮಂದಿ ಚಾಲಕ ಮತ್ತು ನಿರ್ವಾಹಕರು ಮೆಕ್ಯಾನಿಕ್‌ಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರು. ಧರ್ಮಸ್ಥಳ ಡಿಪ್ಪೋದಲ್ಲಿ ದಿನಂಪ್ರತಿ ೮೫ ಬಸ್‌ಗಳು ಹೊರಡುತ್ತದೆ. ಇದರಲ್ಲಿ ದೂರದೂರಿಗೆ 56 ಬಸ್ ಮತ್ತು ಗ್ರಾಮೀಣ ಭಾಗದಲ್ಲಿ 29 ಬಸ್‌ಗಳು ಓಡಾಟ ನಡೆಸುತ್ತದೆ.
ಹಾಜರಾತಿ ನೀಡುವಂತೆ ಒತ್ತಾಯ :
ಸರಕಾರಿ ಬಸ್ಸುಗಳ ನೌಕರರ ಮುಷ್ಕರದಿಂದ ಪ್ರಯಾಣಿಕರು ಪರದಾಟ ನಡೆಸುತ್ತಿದ್ದರೆ, ಅನೇಕ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ಇಲ್ಲದೆ ಸಮಸ್ಯೆಯಾಗಿದೆ.
ಇತರ ವಾಹನದವರು ದುಬಾರಿ ವೆಚ್ಚ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸಮಸ್ಯೆ ನಿವಾರಿಸಿ, ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಹಾಜರಾತಿ ನೀಡುವಂತೆ ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸಾಂಕೇತಿಕವಾಗಿ ತರಗತಿ ಬಹಿಷ್ಕರಿಸಿ ಮನವಿ ಸಲ್ಲಿಸಿದ ಘಟನೆಯೂ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.