ಪಪುವಾ ನ್ಯೂಗಿನಿಯಲ್ಲಿ ಭೂಕಂಪ

ದ್ವೀಪರಾಷ್ಟ್ರ ಪಪುವಾ ನ್ಯೂಗಿನಿಯಲ್ಲಿ ಮಂಗಳವಾರ ಬೆಳಗಿನ ಜಾವ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ ೬.೩ ರಷ್ಟು ತೀವ್ರತೆ ದಾಖಲಾಗಿದೆ. ಅಮೆರಿಕ ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರದ ವರದಿಯಂತೆ ಸಮುದ್ರದ ೬.೬ ಕಿ ಮೀ ಆಳದಲ್ಲಿ ಕಂಪನವಾಗಿದ್ದು, ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಪೆಸಿಫಿಕ್ ಸಮುದ್ರದಲ್ಲಿರುವ ದ್ವೀಪ ರಾಷ್ಟ್ರ ಪಪುವಾ ನ್ಯೂಗಿನಿಯಲ್ಲಿ ಹವಾಯಿ ಮೂಲದ ಸುನಾಮಿ ಎಚ್ಚರಿಕೆ ಸಂಸ್ಥೆ ಯಾವುದೇ ಸುನಾಮಿ ಮುನ್ಸೂಚನೆ ನೀಡಿಲ್ಲ ಎನ್ನಲಾಗಿದೆ. ಆಸ್ಟ್ರೇಲಿಯ ಖಂಡ ರಾಷ್ಟ್ರಗಳಲ್ಲಿ ಭೂಕಂಪ ಸಾಮಾನ್ಯವಾಗಿದ್ದು, ಆದ್ದರಿಂದ ಈ ಪ್ರದೇಶಗಳನ್ನು ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.