ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ನನ್ನ ಬಗ್ಗೆ ಟೀಕೆ ಮಾಡಿರುವುದಕ್ಕೆ ಬೇಸರವಿಲ್ಲವೆಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ. ನನ್ನ ಬಗೆಗಿನ ಟೀಕೆಗೆ ಬೇಸರವಿಲ್ಲ, ಆದರೆ ಹಿರಿಯ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ಎ.ಕೆ. ಆಂಟನಿ ಸೇರಿದಂತೆ ಹಲವು ಹಿರಿಯ ನಾಯಕರನ್ನು ಟೀಕಿಸಿದ್ದಕ್ಕೆ ನೋವಾಗಿದೆಯೆಂದು ಸಚಿವ ದೇಶಪಾಂಡೆ ತಿಳಿಸಿದ್ದಾರೆ. ಮಾರ್ಗರೇಟ್ ಆಳ್ವ ಅವರು ತಮ್ಮ ರಾಜಕೀಯ ಜೀವನದಲ್ಲಿ ಒಮ್ಮೆ ಮಾತ್ರ ಚುನಾವಣೆಯಲ್ಲಿ ವಿಜಯಿಯಾಗಿದ್ದರು, ಆಗ ಅವರ ಜೊತೆ ನಾನಿದ್ದೆ, ಇದನ್ನು ಆಳ್ವ ಅವರು ನೆನಪಿನಲ್ಲಿಡಬೇಕೆಂದು ದೇಶಪಾಂಡೆಯವರು ಹೇಳಿದ್ದಾರೆ.