ಗೇರುಕಟ್ಟೆ : ಕಳಿಯ ಮೇರ್ಲದಲ್ಲಿ ನಿಧಿಶೋಧ

Advt_NewsUnder_1
Advt_NewsUnder_1
Advt_NewsUnder_1

koliಗೇರುಕಟ್ಟೆ : ಕಳಿಯ ಮೇರ್ಲ ಎಂಬಲ್ಲಿ ನಿಧಿ ಕಳ್ಳರ ತಂಡದಿಂದ ನಿಧಿಶೋಧ ನಡೆದಿದೆ ಎಂದು ಶಂಕಿಸಲಾಗಿದೆ.
ಈ ಕೃತ್ಯವು ಶಿವರಾಮ ಎಂಬವರ ಮನೆಯ ಪಕ್ಕದಲ್ಲಿರುವ ಕಾಡಿನಲ್ಲಿ ನಡೆದಿದ್ದು , ಜು.೨೪ರಂದು ಬೆಳಕಿಗೆ ಬಂದಿರುತ್ತದೆ. ಎರಡು ದಿನಗಳ ಹಿಂದೆ ಬೈಕ್ ಹಾಗೂ ಕಾರಿನಲ್ಲಿ ಕೆಲವರು ಬಂದು ಹೋಗಿರುವುದನ್ನು ಗಮನಿಸಿದ್ದು, ದಾರಿ ತಪ್ಪಿ ಬಂದಿರಬಹುದೆಂದು ಸುಮ್ಮನಿದ್ದರು. ನಂತರ ಈ ಸ್ಥಳದಲ್ಲಿ ವಾಮಾಚಾರಕ್ಕೆ ಬಳಸಿದ್ದ ವಸ್ತುಗಳ ಪತ್ತೆಯಾಗಿದ್ದು. ಸ್ಥಳದ ಸುತ್ತದ ನಕ್ಷೆ, ನಿಧಿ ಅಗೆದ ಜಾಗದ ಸುತ್ತಲೂ ಹರಳು, ಕುಂಕುಮ, ಕುಂಬಳಕಾಯಿ ಹಾಗೂ ಮುಂತಾದ ವಸ್ತುಗಳೊಂದಿಗೆ ಕೋಳಿಯನ್ನು ಬಲಿ ಕೊಡಲಾಗಿದೆ.
೫ ವರ್ಷಗಳ ಹಿಂದೆ ಆ ಪ್ರದೇಶದಲ್ಲಿ ಮನೆ ನಿರ್ಮಿಸಲಾಗಿದ್ದು, ಹಾವುಗಳು ಸುತ್ತಾಡುತ್ತಿದ್ದ ಕಾರಣ ಇಲ್ಲಿ ವಾಸವಾಗಬಾರದೆಂದು ಪ್ರಶ್ನೆ ಕಂಡು ಬಂದಿತ್ತು. ಅದರಂತೆ ಶಿವರಾಮ ಅವರ ಕುಟುಂಬ ಮನೆ ತೊರೆದಿದ್ದು, ಸ್ವಲ್ಪ ದೂರದಲ್ಲಿ ಮನೆ ನಿರ್ಮಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.