ವೇಣೂರು ಜೈನ್ ಮಿಲನ್ ಮಾಸಿಕ ಸಭೆ-ಆಹಾರೋತ್ಸವ

Advt_NewsUnder_1
Advt_NewsUnder_1
Advt_NewsUnder_1

jain milanವೇಣೂರು : ವೇಣೂರು ಜೈನ್ ಮಿಲನ್‌ನ ಮಾಸಿಕ ಸಭೆ ಹಾಗೂ ಆಟಿ ತಿಂಗಳ ಪ್ರಯುಕ್ತ ಆಹಾರೋತ್ಸವ ಕಾರ್ಯಕ್ರಮವು ಇಲ್ಲಿಯ ಶ್ರೀ ಬಾಹುಬಲಿ ಸಭಾಭವನದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ವೇಣೂರು ಜೈನ್ ಮಿಲನ್‌ನ ಅಧ್ಯಕ್ಷ ಉದಯ ಕುಮಾರ್ ಸೇಮಿತ ವಹಿಸಿದ್ದರು. ಭಾರತೀಯ ಜೈನ್ ಮಿಲನ್‌ನ ಮಂಗಳೂರು ವಿಭಾಗದ ನಿಕಟಪೂರ್ವ ನಿರ್ದೇಶಕ ಮಾಣಿಕ್ಯರಾಜ್ ಅಜ್ರಿ ಮೂಡಬಿದಿರೆ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ವೇಣೂರು ಶ್ರೀ ದಿಗಂಬರ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಕಾರ್ಯದರ್ಶಿ ವಿಜಯರಾಜ ಅಧಿಕಾರಿ ಮಾರಗುತ್ತು ಉಪಸ್ಥಿತರಿದ್ದರು.
ಆಹಾರೋತ್ಸವ ಕಾರ್ಯಕ್ರಮದಲ್ಲಿ ಶ್ರಾವಕರು ತಯಾರಿಸಿದ ಸುಮಾರು 40 ಬಗೆಯ ವಿವಿಧ ಖಾದ್ಯಗಳನ್ನು ಪ್ರದರ್ಶಿಸಲಾಗಿದ್ದು, ಬಳಿಕ ರುಚಿ ಸವಿಯಲು ಎಲ್ಲರಿಗೂ ಅವಕಾಶ ನೀಡಲಾಯಿತು. ಸುಧೀರ್ ಕುಮಾರ್ ಸ್ವಾಗತಿಸಿ ವಿವಿಧ ಬಗೆಯ ಖಾದ್ಯಗಳ ಬಗ್ಗೆ ಪರಿಚಯಿಸಿದರು. ಸುಧೀರ್ ಕುಮಾರ್ ಪೆರ್ಮಾಣು ಸನ್ಮಾನಪತ್ರ ವಾಚಿಸಿ ಪ್ರಶಾಂತ್ ಕುಮಾರ್ ವಂದಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.