ಬೆಳ್ತಂಗಡಿ : ವಾಯುಸೇನೆಯ ವಿಮಾನ ದುರಂತದಲ್ಲಿ ಕುವೆಟ್ಟು ಏಕನಾಥ ಶೆಟ್ಟಿ ಕಣ್ಮರೆ…?

Advt_NewsUnder_1
Advt_NewsUnder_1
Advt_NewsUnder_1

yodha 1

yodha 3

yodha 4

yodha 5

yodha 6

YODHAಬೆಳ್ತಂಗಡಿ : ಜು.22ರಂದು ಚೆನೈನ ತಾಂಬರಂ ವಾಯುನೆಲೆಯಿಂದ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದಲ್ಲಿನ ಪೋರ್ಟ್ ಬ್ಲೇರ್‌ಗೆ ನಾಲ್ವರು ಅಧಿಕಾರಿ ಹಾಗೂ 29 ಮಂದಿಯೊಂದಿಗೆ ವಾಯುಪಡೆಯ ಎಎನ್-31 ಎಂಬ ಸರಕು ಸಾಗಣೆ ವಿಮಾನವು ಕಣ್ಮರೆಯಾಗಿದ್ದು, ಈ ದುರಂತದಲ್ಲಿ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಸಮೀಪದ ಹವ್ಯಕ ಭವನ ನಮ್ಮ ಮನೆ ಸಮೀಪದ ಯೋಧ ಏಕನಾಥ ಶೆಟ್ಟಿ ಇದ್ದರೆಂದು ಪ್ರಾಧಮಿಕ ಮಾಹಿತಿ ಲಭಿಸಿದೆ.
ಕಳೆದ ೩೦ ವರ್ಷಗಳಿಂದ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದ ಶೆಟ್ಟಿ ಅವರು ಬಳಿಕ ಮತ್ತೆ ವಾಯುಸೇನೆಯ ಡೆಫೆನ್ಸ್ ಸರ್ವೀಸ್ ಕಾರ್ಪ್ಸ್ (ಡಿಎಸ್‌ಸಿ) ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮಧ್ಯಾಹ್ಮ ಸುಮಾರು 3.30ಕ್ಕೆ ಅವರ ಮನೆಗೆ ದೂರವಾಣಿ ಕರೆ ಬಂದಿದ್ದು, ಅವರ ಪತ್ನಿ ಕರೆ ಸ್ವೀಕರಿಸಿದ್ದಾರೆ. ವಿಮಾನ ನಾಪತ್ತೆಯಾದ ಬಗ್ಗೆ ವಿಚಾರ ತಿಳಿಸಿದ್ದಾರೆ. ಈ ಘಟನೆಯಿಂದ ಯೋಧರ ಮನೆಯವರು ಆತಂಕಗೊಂಡಿದ್ದಾರೆ. ಮನೆಯವರಿಗೆ ಚೆನ್ನೈ ಅಥವಾ ಅಂಡಮಾನ್ ಯಾವ ಊರಿನಿಂದ ಕರೆ ಬಂದಿತ್ತು ಎನ್ನುವುದರ ಮಾಹಿತಿ ಇಲ್ಲ. ಸೇನೆಯಿಂದಲೂ ಸ್ಪಷ್ಟ ಮಾಹಿತಿ ಮನೆಯವರಿಗೆ ಸಿಕ್ಕಿಲ್ಲ. ಇತ್ತೀಚೆಗೆ ರಜೆಯಲ್ಲಿ ಮನೆಗೆ ಬಂದಿದ್ದವರು ಮೂರು ದಿನಗಳ ಹಿಂದೆಯಷ್ಟೇ ಸೇವೆಗೆ ಮರಳಿದ್ದರು. ಇವರ ಪತ್ನಿ ಉಜಿರೆ ಎಸ್.ಡಿ.ಎಂ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

  ವಾಯುಪಡೆ ವಿಮಾನದಲ್ಲಿದ್ದ ಏಕನಾಥ್‌ರವರ ಹಸೆಮಣೆ ಏರಿದ ಕುತ್ತಾರುವಿನ ಭಂಡಾರಬೈಲಿನ ದೊಡ್ಡಮ್ಮನ ಮನೆಯಲ್ಲಿ ಶೋಕ ಮಡುಗಟ್ಟಿದೆ. ಏಕನಾಥ್ ಶೆಟ್ಟಿ ಅವರ ತಂದೆ ದಿ.ಕೃಷ್ಣ ಶೆಟ್ಟಿಯವರು ಭೂಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ್ದು, ಆರಂಭದಲ್ಲಿ ಹೆಂಡತಿ, ಮಕ್ಕಳೊಂದಿಗೆ ಮಂಗಳೂರಿನ ಉರ್ವದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಏಕನಾಥರು ತನ್ನ ಹೈಸ್ಕೂಲ್ ಶಿಕ್ಷಣವನ್ನು ಉರ್ವ ಲೇಡಿಹಿಲ್‌ನ ಸಂತ ಅಲೋಶಿಯಸ್ ಫ್ರೌಢಶಾಲೆಯಲ್ಲಿ ಸಂಪೂರ್ಣಗೊಳಿಸಿ ನಂತರದ ದಿವಸಗಳಲ್ಲಿ ಉದ್ಯೋಗ ನಿಮಿತ್ತ ಪೂನಕ್ಕೆ ತೆರಳಿದ್ದರು.
ಏಕನಾಥರು ಬಾಲ್ಯದ ಶಾಲಾ ರಜಾದಿವಸಗಳನ್ನು ಮಂಗಳೂರು ಹೊರವಲಯದ ಕುತ್ತಾರು ಭಂಡಾರಬೈಲುವಿನ ತನ್ನ ದೊಡ್ಡಮ್ಮ ದಿ| ಚಿನ್ನಕ್ಕೆಯ ಮನೆಯಲ್ಲೇ ಕಳೆಯುತ್ತಿದ್ದರು. ಅಲ್ಲದೆ ಏಕನಾಥ್ ಮತ್ತು ಗುರುವಾಯನಕೆರೆಯ ಜಯಂತಿ ಅವರ ವಿವಾಹ ನಿಶ್ಚಿತಾರ್ಥವೂ ಇದೇ ಮನೆಯಲ್ಲಿ ನಡೆದು ಮದುವೆಯ ವ್ಯವಸ್ಥೆಯನ್ನೂ ಇಲ್ಲೇ ನಡೆಸಿ ಪಾಣೆಮಂಗಳೂರಿನ ಸುಮಂಗಳ ಸಭಾಂಗಣದಲ್ಲಿ ಹಸೆಮಣೆ ಏರಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಮಡುಗಟ್ಟಿದ ದುಃಖ: ಭಂಡಾರಬೈಲಿನ ಏಕನಾಥರ ದೊಡ್ಡಮ್ಮ ಚಿನ್ನಕ್ಕೆ ಮತ್ತು ದೊಡ್ಡಪ್ಪ ತುಕ್ರಶೆಟ್ಟಿ ಮತ್ತು ಅವರ ಮಗ ದೊಡ್ಡಯ್ಯರೂ ನಿಧನರಾಗಿದ್ದು, ಮತ್ತಿಬ್ಬರು ಮಕ್ಕಳಾದ ಬಾಬು ಶೆಟ್ಟಿ ಮತ್ತು ಪದ್ಮನಾಭ ಶೆಟ್ಟಿ ಕುಟುಂಬಸ್ಥರೆಲ್ಲರೂ ದುಃಖತಪ್ತರಾಗಿದ್ದಾರೆ.

  ಯೋಧನ ಮನೆಗೆ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟ್ಟಂದೂರು, ಮಾಜಿ ಶಾಸಕ ಪ್ರಭಾಕರ ಬಂಗೇರ, ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಜಿ ಗೌಡ, ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನ ಮೂರ್ತಿಯವರು ಆಗಮಿಸಿ ಅವರ ಮನೆಯವರನ್ನು ಸಂದರ್ಶನ ಮಾಡಿ ಸಾಂತ್ವನ ಹೇಳುತ್ತಿದ್ದಾರೆ. ಹಲವಾರು ಗಣ್ಯರು, ಗ್ರಾಮದವರು ಯೋಧನ ನಿವಾಸಕ್ಕೆ ತೆರಳುತ್ತಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.