ಲಯನ್ಸ್ ವಲಯಾಧ್ಯಕ್ಷ ನಿತ್ಯಾನಂದ ನಾವರ ದಂಪತಿಗಳಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

nithyananda navara sanmana copyಪಿಲ್ಯ : ಲಯನ್ಸ್ ಜಿಲ್ಲೆ 317 ಡಿ ಯ ಪ್ರಾಂತ್ಯ 6ರ ವಲಯ 2ರ 2015-16ರ ವಲಯಾಧ್ಯಕ್ಷ ನಿತ್ಯಾನಂದ ನಾವರ ಇವರ ವಲಯಾಧ್ಯಕ್ಷತೆಯ ಅವಧಿಯ ಶಾಶ್ವತ ಕಾಮಗಾರಿಯಡಿ ಪಿಲ್ಯ ಗುಡ್‌ಪ್ಯೂಚರ್ ಶಿಕ್ಷಣ ಸಂಸ್ಥೆಗೆ ಆವರಣ ಗೋಡೆಯನ್ನು ನಿರ್ಮಿಸುವಲ್ಲಿ ಶ್ರಮಿಸಿದ ನಿತ್ಯಾನಂದ ನಾವರ ಹಾಗೂ ಶ್ರೀಮತಿ ಪುಷ್ಪಾವತಿ ನಿತ್ಯಾನಂದ ನಾವರ ದಂಪತಿಗಳನ್ನು ಲಯನ್ಸ್ ಜಿಲ್ಲೆ 317 ಡಿ ಯ ದ್ವಿತೀಯ ಉಪ ರಾಜ್ಯಪಾಲ ದೇವದಾಸ ಭಂಡಾರಿಯವರು ಇತ್ತೀಚೆಗೆ ಪಿಲ್ಯ ಗುಡ್‌ಪ್ಯೂಚರ್ ಶಾಲೆಯಲ್ಲಿ ನಡೆದ ಲಯನ್ಸ್ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪ್ರಾಂತ್ಯಾಧ್ಯಕ್ಷ ಲಯನ್ಸ್ ಪ್ರವೀಣ್ ಕುಮಾರ್ ಇಂದ್ರ, ಮಂಗಳೂರು ಉರ್ವ ಸ್ಟೋರ್ ಅಧ್ಯಕ್ಷ ಫ್ರಾಂಕಿ ಹಿಲಾರಿ ಡಿಸೋಜಾ, ಅಲಂಗಾರ್ ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಮಿನ್ ಡಿಸೋಜಾ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಮಂಗಳೂರು, ಜಯರಾಮ್ ಭಂಡಾರಿ ಧರ್ಮಸ್ಥಳ, ಬಿ.ಕೆ ಸೀತರಾಮ ರಾವ್, ಎಂ.ಜಿ ಶೆಟ್ಟಿ, ಹೆಚ್. ರಾಮಕೃಷ್ಣ ಗೌಡ, ಸುಶೀಲಾ ಎಸ್. ಹೆಗ್ಡೆ, ಮೇದಿನಿ ಡಿ. ಗೌಡ, ಸದಾನಂದ ಪೂಜಾರಿ ಉಂಗಿಲಬೈಲು, ಎಲೋಶಿಯಸ್ ಲೋಬೋ ಅಳದಂಗಡಿ, ಧರಣೇಂದ್ರ ಕೆ. ಜೈನ್, ಶಾಲಾ ಸಂಚಾಲಕ ನಸೀರ್ ಅಹಮ್ಮದ್ ಖಾನ್, ಶಾಲಾ ಮುಖ್ಯ ಶಿಕ್ಷಕಿ ನಿರ್ಮಲ ಜೆ.ರಾವ್ ಹಾಗೂ ವಿದ್ಯಾರ್ಥಿಗಳು, ಲಯನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.