ಬೆಳ್ತಂಗಡಿ : ದಕ್ಷಿಣ ಕನ್ನಡ ನೂತನ ಜಿಲ್ಲಾಧಿಕಾರಿಯಾಗಿ ಡಾ| ಕೆ.ಜಿ ಜಗದೀಶ್ರವರು ನಿಯುಕ್ತಿಗೊಂಡಿದ್ದು, ಎ.ಬಿ ಇಬ್ರಾಹಿಂರವರನ್ನು ಬೆಂಗಳೂರಿಗೆ ವರ್ಗಾವಣೆಗೊಳಿಸಲು ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಎ.ದಿನೇಶ್ ಸಂಪತ್ರಾಜ್ರವರು ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
2005ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ತುಮಕೂರಿನ ಡಾ| ಕೆ.ಜಿ ಜಗದೀಶ್ರವರು 1978ರ ಮೇ.20ರಂದು ಜನಿಸಿದ್ದು, 2013ರ ಜೂನ್ 14ರಿಂದ ಬೆಂಗಳೂರು ರಾಜಾಜಿನಗರ ಇಂಡಸ್ಟ್ರೀಯಲ್ ಎಸ್ಟೇಟ್ನ ರಾಜೀವಗಾಂಧಿ ರೂರಲ್ ಹೌಸಿಂಗ್ ಕಾರ್ಪೋರೇಶನ್ ಲಿಮಿಟೆಡ್ನಲ್ಲಿ ಆಡಳಿತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು ಮತ್ತು ಕೃಷಿ ವಿಷಯದಲ್ಲಿ ಪಿಹೆಚ್ಡಿ ಪಡೆದಿರುತ್ತಾರೆ.