ನಾವರ : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಜಯಾನಂದ ಪೂಜಾರಿ

Advt_NewsUnder_1
Advt_NewsUnder_1
Advt_NewsUnder_1

navaraನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಜಯಾನಂದ ಪೂಜಾರಿ ಕೊರಲ್ಲ ಇವರನ್ನು ಕರ್ನಾಟಕ ಸರಕಾರದ ಧಾರ್ಮಿಕ ಧತ್ತಿ ಇಲಾಖೆ ಆಯ್ಕೆ ಮಾಡಿ ಆದೇಶಿಸಿರುತ್ತಾರೆ.
ಸದಸ್ಯರಾಗಿ, ನಾರಾಯಣ ರಾವ್ ಅರ್ಚಕರು, ಚಂದ್ರಶೇಖರ್ ರಾವ್, ಓಬಯ್ಯ ಪೂಜಾರಿ, ಚಿದಾನಂದ ಕೋಟ್ಯಾನ್, ರತ್ನಾಕರ ನಾಯ್ಕ, ರಾಜು ಪೂಜಾರಿ, ಶ್ರೀಮತಿ ವಸಂತಿ ಸಿ. ಪೂಜಾರಿ, ಕು| ದೇವಕಿ ಇವರನ್ನು ಆಯ್ಕೆ ಮಾಡಿರುತ್ತಾರೆ. ಜು. ೩ರಂದು ದೇವಸ್ಥಾನದ ಆಡಳಿತ ಅಧಿಕಾರಿ ಜಯಕೀರ್ತಿ ಜೈನ್ ಅಧಿಕಾರ ಹಸ್ತಾಂತರಿಸಿರುತ್ತಾರೆ. ನೂತನ ಸಮಿತಿಯವರು ಸಹ ಸಮಿತಿಯನ್ನು ರಚಿಸಿರುತ್ತಾರೆ. ಗೌರವಾಧ್ಯಕ್ಷರಾಗಿ ಹೆಚ್. ರವಿರಾಜ್ ಹೆಗ್ಡೆ ನಾವರಗುತ್ತು. ಕಾರ್ಯಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಗುರುದೇವ ಕೊಡಂಗೆ, ಸಂಚಾಲಕರಾಗಿ ನವೀನ್ ಕುಮಾರ್, ಪುಷ್ಪರಾಜ್, ಸುರೇಶ್ ಪೂಜಾರಿ, ದೇವಪ್ಪ ಪೂಜಾರಿ ಇವರನ್ನು ಸಮಿತಿಯ ಸದಸ್ಯರು ಸರ್ವಾನು ಮತದಿಂದ ಆಯ್ಕೆ ಮಾಡಿರುತ್ತಾರೆ ಹಾಗೂ ದೇವಸ್ಥಾನದ ಅಭಿವೃದ್ಧಿ ಹಾಗೂ ದೇವರ ಸೇವೆಯಲ್ಲಿ ಗ್ರಾಮಸ್ಥರ ಹಾಗೂ ಭಕ್ತಾದಿಗಳ ಸಹಕಾರವನ್ನು ಅಧ್ಯಕ್ಷರು ವಿನಂತಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.