ಉಜಿರೆ : ಎಪಿಜೆ ಅಬ್ದುಲ್ ಕಲಾಂ ಸಂಭ್ರಮ

Advt_NewsUnder_1
Advt_NewsUnder_1

ujire 1

ujire

ಉಜಿರೆ :  ದೇಶಕ್ಕೆ ಲಕ್ಷ್ಮೀದೇವಿಯ ಅನುಗ್ರಹವಾಗುವ ಮೊದಲು ಸರಸ್ವತಿಯ ಅನುಗ್ರಹವಾಗಲಿ, ಅಂದರೆ ಸಂಪತ್ತಿಗಿಂತ ಮೊದಲು ಭಾರತೀಯರೆಲ್ಲ ವಿದ್ಯಾವಂತರಾಗಬೇಕು ಆಗ ಸಂಪತ್ತಿನ ಜೊತೆಗೆ ಬದುಕಿಗೊಂದು ಅರ್ಥವೂ ಬರುತ್ತದೆ ಎಂದು ಕಲಾಂ ಪ್ರತಿಪಾದಿಸಿದ್ದರು.

ಜು.೨೦ರಂದು ಉಜಿರೆಯ ಶಾರದಾ ಮಂಟಪದಲ್ಲಿ, ಅ.ಭಾ.ವಿ.ಪ ಮತ್ತು ವೀರಕೇಸರಿ ಸಹಭಾಗಿತ್ವದಲ್ಲಿ ನಡೆದ ಕಲಾಂ ಸಂಭ್ರಮ ಕಾರ್ಯಕ್ರಮದಲ್ಲಿ ಕಲಾಂರ ಬದುಕಿನ ಬಗ್ಗೆ ಮಾತನಾಡುತ್ತಾ, ಅವರ ಅಧ್ಯಾತ್ಮಿಕ ಅನುಯಾಯಿ ಹಾಗೂ ನಿಕಟವರ್ತಿಗಳಾಗಿದ್ದ ಕರ್ನಲ್ ಅಶೋಕ್ ಕಿಣಿಯವರು ವಿವರಿಸಿದರು.

ನಮ್ಮ ಹೃದಯಗಳಲ್ಲಿ ಭಗವದ್ಗೀತೆ, ಕುರಾನ್, ಬೈಬಲ್ ಬಗ್ಗೆ ಭಕ್ತಿಯಿರಲಿ, ಅದಕ್ಕಿಂತಲೂ ಮಿಗಿಲಾದ ಭಕ್ತಿ ಹಿಂದುಸ್ಥಾನದ ಮೇಲಿರಲಿ. ಭಾರತೀಯ ಪರಂಪರೆ ಹೇಳುವಂತೆ ಪ್ರತಿಯೊಬ್ಬನೂ ಆತ್ಮದಲ್ಲಿಯೂ ಪರಮಾತ್ಮನಿರುವಾಗ ನಮ್ಮಲ್ಲಿ ದ್ವೇಷ ಎಂಬ ಪದಕ್ಕೆ ಜಾಗವೇ ಇರುವುದಿಲ್ಲ. ಈ ಧ್ಯೇಯದೊಂದಿಗೆ ನಾವು ಮುಂದುವರಿದರೆ ನಾವು ಕಂಡ ವಿಷನ್-೨೦೨೦ ಖಂಡಿತ ಸಾಕಾರವಾಗುತ್ತದೆ ಎನ್ನುತ್ತಿದ್ದರು. ಹಾಗೆಯೇ ೨೦೨೦ರಲ್ಲಿ ೧ಡಾಲರ್= ೨೦ರೂ. ಆಗಿರುತ್ತದೆ ಎನ್ನುವಾಗ ಅವರ ಕಣ್ಣುಗಳು ಅರಳುತ್ತಿದ್ದವು. ಆಂತರಿಕ ಕಚ್ಚಾಟದ ಬದಲಾಗಿ ಅಂತಹ ದೂರದರ್ಶಿಯ ಆದರ್ಶದ ನೆರಳಿನಲ್ಲಿ ನಡೆದು ವಿಷನ್-೨೦೨೦ ಯ ಅವರ ಕನಸನ್ನು ಸಾಕಾರಗೊಳಿಸೋಣ ಎಂದು ಕಲಾಂ ಅವರ ಆಶಯವನ್ನು ಕರ್ನಲ್ ಅಶೋಕ್ ವಿವರಿಸಿದರು.

ಕಾರ್ಯಕ್ರಮದಲ್ಲಿ ಧರ್ಮ ಜಾಗರಣ ಪ್ರಮುಖ್ ದಿನಕರ್ ಅದೇಲು, ಆರೋಗ್ಯಭಾರತಿ ಜಿಲ್ಲಾ ಸದಸ್ಯೆ ಕು ಅಕ್ಷತಾ ಬಜಪೆ, ಅಭಾವಿಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಶೆಟ್ಟಿ ವೀರ ಕೇಸರಿಯ ಸಂಚಾಲಕ ಅನುರಾಜ್ ಕೂಟದಕಲ್ಲು ಉಪಸ್ಥಿತರಿದ್ದರು. ವೀರ ಕೇಸರಿಯ ಪರವಾಗಿ ಅಶೋಕ್ ಕಿಣಿ ಯವರನ್ನು ಸತೀಶ್ ಶೆಟ್ಟಿ ಮತ್ತು ಸುಧಾಕರ್ ಧರ್ಮಸ್ಥಳ ಗೌರವಿಸಿದರು. ಚಂದನ್ ಗುಡಿಗಾರ್ ಸ್ವಾಗತಿಸಿ ನವೀನ್ ಕನ್ಯಾಡಿ ವಂದಿಸಿದರು. ಅಭಿಷೇಕ್ ಭಟ್ ಮಹೇಶ್ ಕಿಣಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.