ಜು. 25 ರಂದು ಬೀಟ್ ರಾಕರ‍್ಸ್‌ನಿಂದ ಡ್ಯಾನ್ಸರ್ “ಮಾಸ್ಟರ್ ತೌಶೀರ್” ಜೊತೆ ವಿಜಯೋತ್ಸವ

Advt_NewsUnder_1
Advt_NewsUnder_1

toushir copy ಬೆಳ್ತಂಗಡಿ: ಬೀಟ್‌ರಾಕರ‍್ಸ್ ಡ್ಯಾನ್ಸ್ ಅಕಾಡಮಿ ಬೆಳ್ತಂಗಡಿ ಇದರ ವತಿಯಿಂದ ತಮ್ಮ ತರಗತಿಯ ವಿದ್ಯಾರ್ಥಿಯೂ ಆಗಿದ್ದು ಪ್ರಸ್ತುತ ಸುವರ್ಣ ವಾಹಿನಿ ಹಮ್ಮಿಕೊಂಡಿರುವ ಡ್ಯಾನ್ಸ್ ಡ್ಯಾನ್ಸ್ ಕರ್ನಾಟಕ ನಂ 1 ರಿಯಾಲಿಟಿ ಶೋದಲ್ಲಿ ವಿನ್ನರ್ ಆಗಿ ಹೊರಹೊಮ್ಮಿ ತಾಯ್ನಾಡಿಗೆ ಮರಳುತ್ತಿರುವ ಡ್ಯಾನ್ಸರ್ ಮತ್ತು ಸೆಲೆಬ್ರೆಟಿ, ಚಲನ ಚಿತ್ರ ಬಾಲ ನಟ ಮಾಸ್ಟರ್ ಎಂ ತೌಶೀರ್ (ಎಸ್‌ಡಿಎಂ ಸಿಬಿಎಸ್‌ಇ ವಿದ್ಯಾರ್ಥಿ ಉಜಿರೆ) ಅವರಿಗೆ ಸ್ವಾಗತ ಕಾರ್ಯಕ್ರಮ ಮತ್ತು ಅವರೊಂದಿಗೆ ಜು. 25 ರಂದು ಅಪರಾಹ್ನ 3 ಕೆ ಧರ್ಮಸ್ಥಳದಿಂದ ವಿಜಯೋತ್ಸವ ಮೆರವಣಿಗೆಯಲ್ಲಿ ಹೊರಟು ಬಳಿಕ 4.30 ಕ್ಕೆ ಬೆಳ್ತಂಗಡಿಯಲ್ಲಿ ಅಭಿಮಾನಿ ಸಮೂಹದಿಂದ ಅತಿಥಿಗಳ ಸಮ್ಮುಖ ವಿಜಯೋತ್ಸವ ಕಾರ್ಯಕ್ರಮ ಆಚರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಇದರಲ್ಲಿ ಅವರ ಅಭಿಮಾನಿಗಳು ಮುಕ್ತವಾಗಿ ಭಾಗವಹಿಸಬಹುದೆಂದು ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.