HomePage_Banner_
HomePage_Banner_
HomePage_Banner_

ದಸರಾ ಕ್ರೀಡಾ ಕೂಟಕ್ಕೆ ಪೂರ್ವವಾಗಿಯೇ ಆ. 14 ರಂದು ಕಬಡ್ಡಿ ಮತ್ತು ಫುಟ್‌ಬಾಲ್ ಪಂದ್ಯಾಟ

Advt_NewsUnder_1

   ಬೆಳ್ತಂಗಡಿ: ಸರಕಾರದ ಸುತ್ತೋಲೆಯಂತೆ ಈ ವರ್ಷವೂ ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾ ಕೂಟವು ಆ. 20 ರಂದು ನಡೆಯಲಿದ್ದು ಆ ದಿನ ಅತಿಹೆಚ್ಚು ತಂಡಗಳು ಭಾಗವಹಿಸುವುದರಿಂದ ಒಂದೇ ದಿನ ಎಲ್ಲಾ ಕ್ರೀಡಾಕೂಟಗಳನ್ನೂ ಸಂಜೆಯೊಳಗೆ ಮುಗಿಸಲು ಅನಾನುಕೂಲವಾಗಿರುವುದರಿಂದ ಈ ಬಾರಿ ಕ್ರೀಡಾ ಕೂಟದ ಭಾಗವಾದ ಕಬಡ್ಡಿ ಮತ್ತು ಫುಟ್‌ಬಾಲ್ ಪಂದ್ಯಾಟವನ್ನು ಒಂದು ವಾರ ಮುಂಚಿತವಾಗಿ ಅಂದರೆ ಆ. 14 ರಂದು ಇದೇ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿರುತ್ತದೆ. ತಂಡದ ವ್ಯವಸ್ಥಾಪಕರು, ಕ್ರೀಡಾಪಟುಗಳು ಈ ಪ್ರಕಟಣೆಯನ್ನು ಗಮನಿಸಿ ಆ. 14 ರಂದು ಪೂರ್ವಾಹ್ನ ೧೦ಕ್ಕೆ ತಂಡದೊಂದಿಗೆ ಸ್ಥಳದಲ್ಲಿ ಹಾಜರಿರುವಂತೆ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ತಾಲೂಕು ಪಂಚಾಯತ್ ಬೆಳ್ತಂಗಡಿ ಪ್ರಭಾಕರ್ ನಾರಾವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9449914186 ನಂಬರನ್ನು ಸಂಪರ್ಕಿಸಬಹುದು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.