ಸೆಲ್ಫಿಗೆ ಇಬ್ಬರು ಬಲಿ

Advt_NewsUnder_1
Advt_NewsUnder_1

charmadi selfi apaghathaಚಿಕ್ಕಮಗಳೂರು : ಸೆಲ್ಫಿ ತೆಗೆಯುವಾಗ ಇಬ್ಬರು ಪ್ರವಾಸಿಗರು ಚಾರ್ಮಾಡಿಘಾಟಿಯ ಆಲೆಖಾನ್ ಜಲಪಾತಕ್ಕೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹನುಮಂತಪ್ಪ (34), ನಾಗಭೂಷಣ್ (38) ಮೃತಪಟ್ಟವರು.
ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ವಿವಿಧ ಕಡೆ ಪ್ರವಾಸ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ಸಂದರ್ಭ ಇಬ್ಬರೂ ಆಲೆಖಾನ್ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಭ ಆಯತಪ್ಪಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಬಸವರಾಜ, ನಾಗೇಶ್, ಹೊನ್ನೇಶ್ ಜತೆಯಲ್ಲಿದ್ದರು.
ಕೆಲ ತಿಂಗಳ ಹಿಂದಷ್ಟೆ ಮೂಡಿಗೆರೆ ತಾಲೂಕಿನ ಒಬ್ಬ ಯುವಕ ಇದೇ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಬಿದ್ದು ಮೃತಪಟ್ಟಿದ್ದ. ಎರಡು ತಿಂಗಳ ಹಿಂದೆ ಮತ್ತೊಬ್ಬ ಯುವಕ ಗಾಯಗೊಂಡಿದ್ದ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.