ಕಾಯರ್ತಡ್ಕ: ಕಾಯರ್ತಡ್ಕ -ಅರಸಿನಮಕ್ಕಿ -ಶಿಶಿಲ ರಸ್ತೆಯ ಪಾಂಗಾಳ ಎಂಬಲ್ಲಿನ ರಸ್ತೆ ತಿರುವೊಂದರಲ್ಲಿ ಬೈಕ್ ಸ್ಕಿಡ್ ಆಗಿ ಮಗುಚಿ ಬಿದ್ದು ಡಾಂಬರು ರಸ್ತೆಗೆ ತಲೆ ಅಪ್ಪಳಿಸಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಜು.18 ಎಂದು ನಡೆದಿದೆ.
ತೋಟತ್ತಾಡಿ ಗ್ರಾಮದ ಪಿತ್ತಿಲು ಮನೆ ಚಂದ್ರ ಗೌಡರ ಪುತ್ರ, ಬಂಟ್ವಾಳ ಕೆಎಸ್ಆರ್ಟಿಸಿ ಘಟಕದ ಬಸ್ಸು ಚಾಲಕ ಲಕ್ಷ್ಮಣ ಪಿ. (31ವ.) ಎಂಬವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಜು. 16 ರಂದು ತನ್ನ ಸಹೋದರಿಯ ಕಾಯರ್ತಡ್ಕದಲ್ಲಿರುವ ಮನೆಗೆ ಬಂದಿದ್ದ ಲಕ್ಷ್ಮಣ ಪಿ ಅವರು ಜು. 17ರಂದು ಅಲ್ಲಿಂದ ಕೊಕ್ಕಡದಲ್ಲಿರುವ ಪತ್ನಿಯ ಮನೆಗೆಂದು ಹೊರಟಿದ್ದರು. ದಾರಿ ಮಧ್ಯೆ ರಸ್ತೆಯಲ್ಲಿರುವ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಅಫಘಾತ ಸಂಭವಿಸಿದೆ. ಈ ವೇಳೆ ತಲೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.