ಬೆಳಾಲಿನ ರತ್ನ.ಎಸ್ ರವರಿಗೆ ಡಾಕ್ಟರೇಟ್

rathna sಬೆಳಾಲು : ಬೆಳಾಲು ಗ್ರಾಮದ ಸೌತೆಗದ್ದೆ ದಿ| ಕೊರಗಪ್ಪ ಗೌಡರವರ ಪುತ್ರಿ ಬೆಂಗಳೂರಿನ ಹೆಚ್.ಆರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವೆಂಕಟ್ರಮಣ ಪಿ ರವರ ಪತ್ನಿ ರತ್ನಕುಮಾರಿ ಎಸ್ ಇವರಿಗೆ ಬೆಂಗಳೂರಿನ ಕ್ರೈಸ್ತ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಮೆದುಳಿನ ಪಾರ್ಶ್ವವಾಯು ಆಗಿರುವ ಮಕ್ಕಳ ಪ್ರಾಥಮಿಕ ಆರೈಕೆಗಾರರ ಮೇಲೆ ಕುಟುಂಬ ಆಧಾರಿತ ಮಾನಸಿಕ ಮತ್ತು ಸಾಮಾಜಿಕ ಮಧ್ಯಸ್ಥಿಕೆ ಕಾರ್ಯಕ್ರಮದ ಕಾರ್ಯಕಾರಿ ಪರಿಣಾಮ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ್ದರು.
ಕೇರಳ ಕೊಚ್ಚಿನ್ ರಾಜಗಿರಿ ಸಮಾಜ ವಿಜ್ಞಾನಗಳ ಮಹಾವಿದ್ಯಾಲಯದ ಆಡಳಿತಗಾರ ಮತ್ತು ಪ್ರಾಂಶುಪಾಲರಾದ ಡಾ| ಮೇರಿ ವೀನಸ್ ಜೋಸೆಫ್ ಮಾರ್ಗದರ್ಶನ ನೀಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.