ಮುಂಡಾಜೆ ಮದರಸ ಪ್ರಾರಂಭೋತ್ಸವ, ಉಚಿತ ಪಠ್ಯಪುಸ್ತಕ ವಿತರಣೆ

   madarasa prarambhohsva (2)

madarasa prarambhohsva (3)

madarasa prarambhohsva

ಮುಂಡಾಜೆ: ಸಯ್ಯಿದ್ ಕೆ.ಪಿ.ಎಸ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಅವರ ನೇತೃತ್ವ ಮತ್ತು ಆಶೀರ್ವಾದದೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಮುಂಡಾಜೆ “ಮಸ್‌ಲಕ್” ಮದರಸ ಇದರ ೯ ನೇ ವರ್ಷದ ಮದರಸ ಪ್ರಾರಂಭೋತ್ಸವ “ಫತ್‌ಹೇ ಮುಬಾರಕ್” ಮತ್ತು ಎಸ್ಸೆಸ್ಸೆಫ್ ಇಂದಬೆಟ್ಟು ಶಾಖೆಯ ವತಿಯಿಂದ ಕೊಡಮಾಡಲ್ಪಟ್ಟು ಮದರಸ ಪಠ್ಯ ಪುಸ್ತಕಗಳ ಹಸ್ತಾಂತರ ಕಾರ್ಯಕ್ರಮ ಜು. 18 ರಂದು ಮಸ್‌ಲಕ್ ಮದರಸದಲ್ಲಿ ಜರುಗಿತು.
ಅಧ್ಯಕ್ಷತೆಯನ್ನು ಮದರಸ ನಿರ್ವಹಣಾ ಸಮಿತಿ ಅಧ್ಯಕ್ಷ ಕೆರೀಮ್ ಕೆ.ಎಸ್ ವಹಿಸಿದ್ದರು. ಅತಿಥಿಗಳಾಗಿ ಉಜಿರೆಯ ಎ. ಆರ್ ಟ್ರೇಡರ‍್ಸ್‌ನ ಮಾಲಿಕ ಅಬ್ದುಲ್ ರಹಿಮಾನ್ ಉಜಿರೆ, ಉದ್ಯಮಿ ಹಾಗೂ ಎಸ್‌ಎಮ್‌ಎ ಉಜಿರೆ ರೇಂಜ್ ಸಮಿತಿ ಸಂಘಟಕ ಬಶೀರ್, ಉದ್ಯಮಿ ರಫೀಕ್, ಇಂದಬೆಟ್ಟು ಎಸ್ಸೆಸ್ಸೆಫ್ ಶಾಖೆಯ ಅಧ್ಯಕ್ಷ ಶೌಕತ್ತಲಿ, ಕಾರ್ಯದರ್ಶಿ ಸಿನಾನ್ ಇಂದಬೆಟ್ಟು, ಸದಸ್ಯ ಮುಸ್ತಫಾ ಉಪಸ್ಥಿತರಿದ್ದರು. ಮದರಸ ಮುಖ್ಯೋಪಾಧ್ಯಾಯ ಇಬ್ರಾಹಿಂ ಸಖಾಫಿ ಕಬಕ ನೇತೃತ್ವ ವಹಿಸಿ ಉದ್ಬೋದನೆ ನಡೆಸಿದರು. ಸಮಿತಿ ಪ್ರ. ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಎಲ್ಲ ಪದಾಧಿಕಾರಿಗಳು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.