ಪೋಲೀಸ್ ಹೊರಠಾಣೆಯ ಬಗ್ಗೆ ಉಜಿರೆಯಲ್ಲಿ ಸಮಾಲೋಚನಾ ಸಭೆ

ಉಜಿರೆ : ಬೆಳೆಯುತ್ತಿರುವ ನಗರ, ಉಜಿರೆ ಪೇಟೆಯಲ್ಲಿ ಪೋಲೀಸ್ ಹೊರಠಾಣಾ ರಚನೆಯ ಬಗ್ಗೆ ಗ್ರಾ.ಪಂ ಸಭಾಭವನದಲ್ಲಿ ಇಂದು ಸಮಾಲೋಚನಾ ಸಭೆ ನಡೆಯಿತು.
ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ ಸದಸ್ಯ ಶಶಿಧರ ಎಂ ಕಲ್ಮಂಜ , ಕೆ.ಎಸ್.ಐ ಬಾಬು ಗೌಡ ಉಪಸ್ಥಿತರಿದ್ದರು. ಬೆಳ್ತಂಗಡಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಂದೇಶ್ ಡಿ.ಜಿಯವರು ಹೊರಠಾಣೆಯ ಬಗ್ಗೆ ಮಾಹಿತಿ ನೀಡಿ ಜನರ ಸಹಕಾರ ಕೋರಿದರು.
ಸಭೆಯ ಕೊನೆಯಲ್ಲಿ ಉಜಿರೆಯಲ್ಲಿ ಹೊರಠಾಣೆಯ ರಚನೆ ಬಗ್ಗೆ ತೀರ್ಮಾನಕ್ಕೆ ಬರಲಾಯಿತು. ಸಭೆಯಲ್ಲಿ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು, ಪತ್ರಿಕಾ ಮಾಧ್ಯಮದವರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.