HomePage_Banner_
HomePage_Banner_
HomePage_Banner_

ಬಿಜೆಪಿ ತಾಲೂಕು ಅಧ್ಯಕ್ಷರಾದ ರಂಜನ್ ಜಿ. ಗೌಡರಿಗೆ ಅಭಿನಂದನೆ

Advt_NewsUnder_1

ranjan copyಶಿಬಾಜೆ: ಶಿಬಾಜೆ ಬಿಜೆಪಿ ಪಂಚಾಯತ್ ಸಮಿತಿಯ ಸಭೆ ಡಿ.ಪುರಂದರ ರಾವ್ ಇವರ ಮನೆಯಲ್ಲಿ ಜು.9ರಂದು ನಡೆಯಿತು. ಈ ಸಂದರ್ಭ ತಾಲೂಕು ಬಿಜೆಪಿ ನೂತನ ಅಧ್ಯಕ್ಷರಾದ ರಂಜನ್ ಜಿ. ಗೌಡ ಇವರನ್ನು ಮತ್ತು ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯ್ಕ್‌ರನ್ನು ಹಾರ ಹಾಕಿ ಅಭಿನಂದಿಸಲಾಯಿತು.
ಗ್ರಾ.ಪಂ. ಸದಸ್ಯರಾದ ಮಾಧವ ಗೌಡ ನೂತನ ಅಧ್ಯಕ್ಷರನ್ನು ಮತ್ತು ಪ್ರಧಾನ ಕಾರ್ಯದರ್ಶಿಯವರನ್ನು ಸ್ವಾಗತಿಸಿ, ಅಭಿನಂದಿಸಿದರು. ಕೃಷ್ಣಪ್ಪ ಗೌಡ ಬೇಂಗಳ ಶುಭಹಾರೈಸಿದರು. ಕಾರ್ಯಕರ್ತರೆಲ್ಲರೂ ಸೇರಿ ಶಿಬಾಜೆ ಗ್ರಾಮದಲ್ಲಿ ಎಚ್.ಎಸ್ ಚೆನ್ನಪ್ಪ ಗೌಡರು ಪಕ್ಷದಲ್ಲಿದ್ದು ಗ್ರಾಮದಲ್ಲಿ ಮತ್ತು ಪಕ್ಕದ ಗ್ರಾಮದಲ್ಲಿ ಪಕ್ಷ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದು ಅವರನ್ನು ಪಕ್ಷದಿಂದ ಕೈ ಬಿಡಬೇಕೆಂದು ಪಟ್ಟು ಹಿಡಿದಾಗ ಈ ಬಗ್ಗೆ ಪಕ್ಷದಿಂದ ಕೈ ಬಿಡುವುದೆಂದು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ರತೀಶ್ ಗೌಡ ಧನ್ಯವಾದ ವಿತ್ತರು. ಡಿ.ಪುರಂದರ ರಾವ್, ಗಿರೀಶ್ ಭಟ್, ದೀಪಕಾನಂದ, ಪ್ರೇಮಚಂದ್ರ ರಾವ್, ಜಯರಾಮ ಗೌಡ ಮತ್ತು ಸುಮಾರು 100 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.