ಮುಗೇರ ಜನಾಂಗ ಜಾಗೃತಿ ಟ್ರಸ್ಟ್ ಅಭಿನಂದನೆ ಮತ್ತು ಶಿಕ್ಷಣ ಪ್ರೋತ್ಸಾಹ ಸಂಘಟನೆಯನ್ನು ಒಡಕು ಮಾಡುವ ಶಕ್ತಿಗಳ ಬಗ್ಗೆ ಎಚ್ಚರವಿರಲಿ : ಬಂಗೇರ

Advt_NewsUnder_1
Advt_NewsUnder_1

mugera sanga abinandane copyಬೆಳ್ತಂಗಡಿ : ಮುಗೇರ ಜನಾಂಗ ಇತರ ಜನಾಂಗದಂತೆ ತೀರಾ ತುಳಿತಕ್ಕೊಳಗಾದ ವರ್ಗ ಎಂಬುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಸಮುದಾಯವನ್ನು ಜಾಗೃತಿ ಮಾಡಲೆಂದೇ ಅಸ್ತಿತ್ವ ಪಡೆಯುತ್ತಿರುವ ಮು.ಜ.ಜಾ ಟ್ರಸ್ಟ್ ಅಭಿನಂದನಾರ್ಹ. ಆದರೆ ಇಂತಹ ಸಂಘಟನೆಯನ್ನು ಒಡಕು ಮಾಡುವ ಶಕ್ತಿಗಳ ಬಗ್ಗೆ ಎಚ್ಚರವಿರಲಿ ಎಂದು ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ ಅಭಿಪ್ರಾಯಿ ಸಿದರು. ಅವರು ಜು. ೧೦ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಮು.ಜ. ಜಾ ಟ್ರಸ್ಟ್ ವತಿಯಿಂದ ಎಸ್.ಎಸ್. ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಶಿಕ್ಷಣ ಪ್ರೋತ್ಸಾಹ ನೀಡಿ ಮಾತನಾಡಿದರು.
ಟ್ರಸ್ಟ್ ಲೋಗೋ ಅನಾವರಣ ಮಾಡಿ ಸನ್ಮಾನ ಸ್ವೀಕರಿಸಿ ಮಾತನಾಡಿದ ದ.ಕ ಜಿ.ಪಂ ಮಂಗಳೂರು ಇದರ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜನಾಂಗದ ಜನರಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ತಿಳುವಳಿಕೆ ಮಾಡಿ ಅವರನ್ನು ಮೇಲೆತ್ತಬೇಕು. ಟ್ರಸ್ಟ್ ಈ ಪ್ರಯತ್ನದಲ್ಲಿ ಸಂಘಟನೆಯೂ ಸುಭದ್ರವಾಗುತ್ತದೆ ಎಂದು ಆಶಿಸಿದರು, ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಕೆ. ಸದಾಶಿವ ನಿಡ್ಲೆ ವಹಿಸಿದ್ದು ಕಲಿಯುವ ಮಕ್ಕಳಿಗೆ ಹಣದ ರುಚಿ ತೋರಿಸಿ ಅವರನ್ನು ಶಿಕ್ಷಣ ವಂಚಿತರನ್ನಾಗಿಸಬೇಡಿ ಎಂದು ಮನವಿ ಮಾಡಿದರು. ಮುಖ್ಯ ಅತಿಥಿಗಳಾದ ಸೋಮನಾಥ ನಾಯಕ್ ಅಧ್ಯಕ್ಷರು ನಾ.ಸೇ ಟ್ರಸ್ಟ್ ಗುರುವಾಯನಕೆರೆ ಇವರು ಸಮೀಕ್ಷೆ ಪ್ರಕಾರ ದಲಿತ ಸಮುದಾಯ ಕೇವಲ 4 ಶೇಕಡಾ ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣ ಮಾಡಿದ್ದಾರೆ. ಡಿ.ಸಿ ಮನ್ನಾ ಭೂಮಿ ವಿಚಾರದಲ್ಲಿ ನಾ.ಸೇ. ಟ್ರ. ಸದಾ ದಲಿತರ ಪರವಾಗಿ ಇರುತ್ತದೆ ಎಂದು ಭರವಸೆ ನೀಡಿದರು ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕರು ವಿಜಯ ವಿಕ್ರಮ ರಾಮಕುಂಜ ವಿದ್ಯಾರ್ಥಿಗಳು ದುಶ್ಚಟಕ್ಕೆ ಒಳಗಾಗಬಾರದು ಎಂದರು. ಟ್ರಸ್ಟ್ ಉಪಾಧ್ಯಕ್ಷ ಮೋಹನ್ ಎಚ್.ಬಿ ಮಾಚಾರ್ ಪ್ರಸ್ತಾವಿಸಿ ಪಜಿರಡ್ಕ ಓಂಕಾರೇಶ್ವರ ಭಜನಾ ಮಂಡಳಿ ಸದಸ್ಯರುಗಳಾದ ಸುಜನ್, ಸುಜಯಾ, ಮತ್ತು ಸುಚಿತ್ರಾ ಪ್ರಾರ್ಥಿಸಿ, ಟ್ರಸ್ಟಿಗಳಾದ ಬಾಲು ಬಿ.ಕೆ ಸ್ವಾಗತಿಸಿ, ಕೊರಗಪ್ಪ ಅಳದಂಗಡಿ ಧನ್ಯವಾದವಿತ್ತು, ಕೋಶಾಧಿಕಾರಿ ಕೃಷ್ಣಪ್ಪ ಎಂ.ಕೆ ಕನ್ಯಾಡಿ ನಿರೂಪಿಸಿದರು. ಟ್ರಸ್ಟ್ ಉಪಾಧ್ಯಕ್ಷರುಗಳಾದ ಜಯಕುಮಾರ್ ಪುಂಜಾಲಕಟ್ಟೆ, ಸಂಜೀವ ಕೊಡೆಕ್ಕಲ್, ಕಾರ್ಯದರ್ಶಿ ಸುಂದರ ನಾವೂರು, ಬಾಬು ಮುಂಡತ್ತೋಡಿ, ಸುಂದರೇಶ್ ಎಂ.ಕೆ ಕನ್ಯಾಡಿ, ಮಾಯಿಲ ನೆಕ್ಕರೆ, ಜಗದೀಶ್ ಮಾಚಾರ್, ವಾಸು ಬಳೆಂಜ, ಲಕ್ಷ್ಮೀಶ ಕೆ. ಸಹಕರಿಸಿದರು. ಒಟ್ಟು ಹತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ನಗದು ಪ್ರೋತ್ಸಾಹ ಧನ ನೀಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿ ಸಂಜೀವ ಕೊಡೆಕ್ಕಲ್ ಅವರಿಗೆ ಸ್ವ ಉದ್ಯೋಗಕ್ಕಾಗಿ ಆಟೋ ಖರೀದಿಸುವಲ್ಲಿ ಸಂಪೂರ್ಣ ಸಹಕಾರವಿತ್ತ ಉದಯ ಕುಮಾರ್ ಧರ್ಮಸ್ಥಳ ಇವರು ಅಟೋ ಕೀಯನ್ನು ಸಂಜೀವರಿಗೆ ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.