ನಾರಾವಿ : ಬಡಕುಟುಂಬಕ್ಕೆ ಸಹಕರಿಸುವಿರಾ…

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

BADA FAMILY copyನಾರಾವಿ : ಕೆಲವೊಮ್ಮ ವಿಧಿ ಅದೆಷ್ಟು ಕ್ರೂರಿ ಎಂದೆನಿಸುತ್ತದೆ.ಜೀವನಪೂರ್ತಿ ಬಡತನದಿಂದ ಕಷ್ಟಗಳ ಸರಮಾಲೆಯನ್ನು ಎದುರಿಸಿ ನೋವನ್ನುಂಡ ಕುಟುಂಬವೊಂದು ವಿಧಿಯಾಟದ ಮುಂದೆ ಹೈರಾಣಾಗಿ ದಿಕ್ಕೆಟ್ಟು ಕುಳಿತ ಅಸಹಾಯಕ ಜೀವಗಳ ನೋವಿನ ಕಥೆಯಿದು..
ಕುಟುಂಬದ ಯಜಮಾನ ಮೋಹನ ಮಲೆಕುಡಿಯ ಅತ್ಯಂತ ಶ್ರಮಜೀವಿ. ಇವರ ದುಡಿಮೆಯಿಂದ ಈ ಕುಟುಂಬ ಅಲ್ಲಿಂದಲ್ಲಿಗೇ ನೆಮ್ಮದಿಯ ಜೀವನ ಸಾಗಿಸುತ್ತಿತ್ತು.ಮೋಹನ್ ಮಲೆಕುಡಿಯರು ಸಮೀಪದ ಕಾಡಿಗೆ ತೆರಳಿ ಕಾಡುತ್ಪತ್ತಿ ಸಂಗ್ರಹಿಸಿ ಮಾರಿ ಬಂದ ಹಣದಲ್ಲಿ ತನ್ನ ಕುಟುಂಬವನ್ನು ಸಲಹುತ್ತಿದ್ದರು. ಇದ್ದುದರಲ್ಲಿ ನೆಮ್ಮದಿಯಿಂದ ಜೀವನಸಾಗಿಸುತ್ತಿದ್ದ ಈ ಕುಟುಂಬದ ಮೇಲೆ ವಿಧಿಯು ಕ್ರೂರ ದೃಷ್ಟಿ ನೆಟ್ಟಿದ್ದು ಇವರಿಗೆ ತಿಳಿಯಲೇ ಇಲ್ಲ.
ಎರಡು ವಾರದ ಹಿಂದೆ ಒಂದು ದಿನ ತೆಂಗಿನಕಾಯಿ ಕೀಳಲು ಮರಹತ್ತಿದ ಮೋಹನ್ ಮಲೆಕುಡಿಯರು ಎಲ್ಲಾ ಕಾಯಿಗಳನ್ನು ಕಿತ್ತು ಇನ್ನೇನು ಕೆಳಕ್ಕೆ ಇಳಿಯಬೇಕೆನ್ನುವಷ್ಟರಲ್ಲಿ ಮರದಿಂದ ಆಯತಪ್ಪಿ ಬಿದ್ದು ಗಂಭಿರವಾಗಿ ಗಾಯಗೊಂಡಿದ್ದರು.ಸ್ಥಳೀಯರು ಇವರನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಅರ್ಧದಾರಿಯಲ್ಲೇ ಮೋಹನ್ ಮಲೆಕುಡಿಯರ ಪ್ರಾಣಪಕ್ಷಿ ಹಾರಿಹೋಗಿತ್ತು. ಇವರನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಇವರ ಕುಟುಂಬಕ್ಕೇ ದಿಕ್ಕೇ ತೋಚದಂತಹ ಪರಿಸ್ಥಿತಿ.
ಪತ್ನಿ ಬೀಡಿ ಕಟ್ಟಿ ಸಂಸಾರ ನಿಭಾಯಿಸುವ ಪರಿಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಕಟ್ಟಿದ ಬೀಡಿಯನ್ನು ನೀಡಲು ಪೇಟೆಗೆ ಬರಬೇಕೆಂದರೆ 6-7 ಕಿ.ಮೀ ನಡೆಯಬೇಕು.ಎಲ್ಲದಕ್ಕೂ ಕಾಡುತ್ಪತ್ತಿಯನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ.
ಮೂವರು ಮಕ್ಕಳ ಶಿಕ್ಷಣದ ಜವಾಬ್ದಾರಿಯ ಜೊತೆಗೆ ಸಂಸಾರ ನಿಭಾಯಿಸುವ ಜವಾಬ್ದಾರಿ ಮೋಹನ್ ಅವರ ಪತ್ನಿಯ ಹೆಗಲಿಗೆ ಬಿದ್ದಿದೆ.ಕಣ್ಣೀರಲ್ಲಿ ಕೈತೊಳೆಯುತ್ತಾ ಮೋಹನ್ ಅವರ ನೆನಪಿನಲ್ಲೇ ದಿನದೂಡುತ್ತಿರುವ ಈ ಬಡಕುಟುಂಬ ಸಹೃದಯಿ ದಾನಿಗಳ ನೆರವಿಗಾಗಿ ಹಂಬಲಿಸುತ್ತಿದೆ.ಇವರ ನೋವಿಗೆ ಸ್ಪಂದಿಸಿದ ಮಲೆಕುಡಿಯರ ಯುವವೇದಿಕೆ ಮತ್ತು ಕುತ್ಲೂರು ಮಲೆಕುಡಿಯರ ಸೇವಾಸಂಘ ಇವರು ಸ್ವಲ್ಪಮಟ್ಟಿನ ಧನಸಹಾಯ ನೀಡಿ ಈ ಕುಟುಂಬಕ್ಕೆ ಆಸರೆಯಾಗಿದೆ. ಈ ಕುಟುಂಬಕ್ಕೆ ನೆರವು ನೀಡಬಯಸುವ ಸಹೃದಯಿ ದಾನಿಗಳು ಈ ಕೆಳಗಿನ ಉಳಿತಾಯ ಖಾತೆಗೆ ಜಮೆ ಮಾಡಬಹುದು..
ಕೆನರಾ ಬ್ಯಾಂಕ್

ಕಾತ್ಯಾಯಿನಿ ಬಿಲ್ಡಿಂಗ್

ಬಸ್ ಸ್ಟ್ಯಾಂಡ್ ಎದುರು ಬೆಳ್ತಂಗಡಿ

IFSC CODE-CNRB0002749
MCIR CODE-575015048

A/C NO – 2749101008102 ಈ ಖಾತೆಗೆ ಜಮಾ ಮಾಡಬಹುದು ಪೋನ್ ನಂ-9535484603

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.