ಲಯನ್ಸ್ ಕ್ಲಬ್ ಬೆಳ್ತಂಗಡಿ : ಅಧ್ಯಕ್ಷರಾಗಿ ಸುಶೀಲಾ ಎಸ್ ಹೆಗ್ಡೆ, ಕಾರ್ಯದರ್ಶಿ ಮೇದಿನಿ ಡಿ ಗೌಡ

121ಬೆಳ್ತಂಗಡಿ : ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಶತಮಾನೋತ್ಸವ ವರ್ಷದ ಈ ಶುಭ ಸಂದರ್ಭದಲ್ಲಿ ಬೆಳ್ತಂಗಡಿ ಘಟಕ ವನ್ನು ಮುನ್ನಡೆಸುವ ಅವಕಾಶ ಮಹಿಳೆಯರಿಗೆ ಪ್ರಾಪ್ತವಾಗಿದ್ದು ಪ್ರಸ್ತುತ ವರ್ಷದ ಆಡಳಿತ ಸಾಲಿನ ಅಧ್ಯಕ್ಷರಾಗಿ, ಪಂಚಾಯತ್‌ನ ನಿವೃತ್ತ ಪಿಡಿಒ ಸುಶೀಲಾ ಶಂಕರ ಹೆಗ್ಡೆ, ಪ್ರ. ಕಾರ್ಯದರ್ಶಿ ನಿವೃತ್ತ ಶಿಕ್ಷಕಿ ಮೇದಿನಿ ಡಿ. ಗೌಡ, ಕೋಶಾಧಿಕಾರಿ ಬಳೆಂಜ ಗ್ರಾ.ಪಂ. ಸದಸ್ಯ ಅನಿಲ್ ನಾಯ್ಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ಲಾಲ, ನಿಕಟಪೂರ್ವ ಅಧ್ಯಕ್ಷರಾಗಿ ರಾಜು ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಧರಣೇಂದ್ರ ಕೆ ಜೈನ್, ವಸಂತ ಶೆಟ್ಟಿ ಶ್ರದ್ಧಾ ಮತ್ತು ಬಿ ಹೇಮಂತ ರಾವ್, ಸದಸ್ಯತನ ಅಭಿವೃಧ್ಧಿ ಅಧಿಕಾರಿಯಾಗಿ ಹೆಚ್. ರಾಮಕೃಷ್ಣ ಗೌಡ, ಲಾಂಗೂಲ ಚಾಲಕರಾಗಿ ರಘುರಾಮ ಶೆಟ್ಟಿ ಸಾಧನಾ, ಕಾರ್ಯಕ್ರಮ ಸಂಯೋಜಕರಾಗಿ ಉಪನ್ಯಾಸಕ ಕೆ ಕೃಷ್ಣ ಆಚಾರ್ಯ, ಪತ್ರಿಕಾ ಕಾರ್ಯದರ್ಶಿಯಾಗಿ ಅಶ್ರಫ್ ಆಲಿಕುಂಞಿ ಮುಂಡಾಜೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿ.ಆರ್. ನಾಯಕ್, ಎಂ.ಜಿ. ಶೆಟ್ಟಿ, ಬಿ.ಕೆ. ಸೀತಾರಾಮ ರಾವ್, ಬಿ. ರಘುರಾಮ ಗಾಂಭೀರ, ಎಂ. ಜಯರಾಂ ಭಂಡಾರಿ, ಪ್ರಕಾಶ್ ಶೆಟ್ಟಿ ನೊಚ್ಚ, ನಿತ್ಯಾನಂದ ನಾವರ, ರಾಜೀವ ಡಿ. ಗೌಡ ರಮೇಶ್ ಕುಮಾರ್, ನಾಮದೇವ ರಾವ್ , ಸಂತೋಷ್ ಕುಮಾರ್ ಕಾಪಿನಡ್ಕ, ಶಿವಕಾಂತ ಗೌಡ, ಪ್ರಕಾಶ ಗೌಡ, ಜಯಂತ ಶೆಟ್ಟಿ ಕುಂಟಿನಿ, ಜಗನ್ನಾಥ ಶೆಟ್ಟಿ, ಹರೀಶ್ ರಾವ್, ರವೀಂದ್ರ ಶೆಟ್ಟಿ ಬಳೆಂಜ, ರತ್ನರಾಜ ಹೆಗ್ಡೆ ಮುಂಡಾಜೆ ಇವರು ಆಯ್ಕೆಯಾಗಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.