ಭಾರತ್ ಅಯರ‍್ನ್ ವರ್ಕ್ಸ್ ಬಿ.ಪಾಂಡುರಂಗ ಬಾಳಿಗರಿಗೆ ಸೌರಭರತ್ನ ಪ್ರಶಸ್ತಿ ಪ್ರದಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ayarn work copyಉಜಿರೆ : ಸುಮ ಸೌರಭ ಪತ್ರಿಕೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ಜರಗಿದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ಸಮಾಜ ಸೇವೆ, ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಉಜಿರೆ ಭಾರತ್ ಅಯರ‍್ನ್ ವರ್ಕ್ಸ್‌ನ ಮಾಲಕ ಬಿ. ಪಾಂಡುರಂಗ ಬಾಳಿಗರವರನ್ನು ಧಾರವಾಡದ ಮಾಜಿ ಮಂತ್ರಿ ಹಾಗೂ ಶಾಸಕ ಚಂದ್ರಕಾಂತ ಬೆಲ್ಲದ, ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಯವರು, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸೌರಭರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಪ್ರಭಾ ಸುವರ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ವಿ.ಸಿ ಸುವರ್ಣ, ಮೂಡಬಿದ್ರೆ ಉದ್ಯಮಿ ಶ್ರೀಪತಿ ಭಟ್, ಉಡುಪಿ ಜಯರಾಮ್, ಸುಮ ಸೌರಭ ಪತ್ರಿಕಾ ಸಂಪಾದಕ ಎಂ.ಜೆ. ರಾವ್, ಉದ್ಯಮಿ ಹಾಗೂ ಜ್ಞಾನದೀಪ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಮಂಜುನಾಥ ರೇವಣ್‌ಕಾರ್, ಯುಗ ಪುರುಷ ಪತ್ರಿಕಾ ಸಂಪಾದಕ ಭುವನಾಥ ರಾಮ ಉಡುಪ, ಲ| ಸದಾಶಿವ ಹೆಗಡೆ, ಮಂಗಳಾದೇವಿ , ದೇವಸ್ಥಾನದ ಮೊಕ್ತೇಸರ ರಮಾನಾಥ ಹೆಗ್ಡೆ, ಚಿದಾನಂದ ಕಾಮತ್ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.