HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ರೆಖ್ಯ ಶ್ರೀ ಗುಡ್ರಾಮಲ್ಲೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಸಮಿತಿ ರಚನೆ

rekhyaರೆಖ್ಯ : ಶ್ರೀ ಗುಡ್ರಾ ಮಲ್ಲೇಶ್ವರ ದೇವಾಲಯದ ನವೀಕರಣ ಮತ್ತು ಬ್ರಹ್ಮಕಲಶೋತ್ಸವ ಬಗ್ಗೆ ಸಮಾಲೋಚನಾ ಸಭೆ ಇತ್ತೀಚೆಗೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೈಕುರೆ ಮಂಜುನಾಥ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಸಲಹೆ ಸೂಚನೆ ನೀಡಿದರು. ಮುಂದಿನ ಜನವರಿ 12 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶ ನಡೆಯಲಿದೆ.
ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಸುಬ್ರಹ್ಮಣ್ಯ ಮಠಾಧೀಶರಾದ ವಿದ್ಯಾಪ್ರಸನ್ನ ಸ್ವಾಮೀಜಿಯವರನ್ನು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕೈಕುರೆ ವೆಂಕಟ್ರಮಣ ಗೌಡ,  ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೈಕುರೆ ಮಂಜುನಾಥ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಶಿವಪ್ರಸಾದ್ ಭಟ್ ಕೆದಂಬಿಲ ಇವರನ್ನು ಆಯ್ಕೆ ಮಾಡಲಾಯಿತು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿಯಾಗಿ ಲಕ್ಷ್ಮಣ ಗೌಡ ಕನ್ಯಕಂಡ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಟಿ.ಕೆ ಸದಾಶಿವ, ಕಾರ್ಯಾಧ್ಯಕ್ಷರಾಗಿ ಬಾಲಕೃಷ್ಣ ಗೌಡ ನೆಲ್ಯಾಡಿ, ವಸಂತ ಗೌಡ ಗುಡ್ರಾಡಿ, ಕಾರ್ಯದರ್ಶಿಯಾಗಿ ಆನಂದ ಗೌಡ ಗೊಬ್ಬರದಂಡ, ಗೌರವ ಸಲಹೆಗಾರರಾಗಿ ಶ್ರೀನಿವಾಸ ಮೂಡಿತ್ತಾಯ ಶಿಶಿಲ, ಸಚ್ಚಿದಾನಂದ ಭಟ್ ಶಿಬಾಜೆ, ಪುರಂದರ ಭಟ್, ದೇವಸ್ಥಾನದ ಪ್ರದಾನ ಅರ್ಚಕ ತಿರುಮಲೇಶ್ ಭಟ್, ಪ್ರಶಾಂತ್ ಭಟ್, ಕೆ.ಪಿ ದುರ್ಗಾಪ್ರಸಾದ್, ಯಶೋಧರ ಗೌಡ ಮುಂಬಾಲು ಕೋಣಾಜೆ, ರವಿಚಂದ್ರ ಹೊಸಒಕ್ಲು ನೆಲ್ಯಾಡಿ, ಪೂವಾಜೆ ಕುಶಾಲಪ್ಪ ಗೌಡ, ಅಂಡೆಂಜೆ ರಾಧಾಕೃಷ್ಣ ಗೌಡ, ಅಂಡೆಂಜೆ ಸಂಜೀವ ಗೌಡ, ಮಂಜುನಾಥ ಗೌಡ ಅಮ್ಮಾಜೆ, ಸುಂದರ ಗೌಡ, ರಾಮಚಂದ್ರ ಜಿ. ಎಡ್ಮಡ್ಕ ಇವರುಗಳು ಆಯ್ಕೆಯಾದರು. ವಸಂತ ಗೌಡ ಸ್ವಾಗತಿಸಿ, ವಿನಯ ಕುಮಾರ್ ವಂದಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.