ವೇಣೂರು ಐಸಿವೈಎಂಗೆ ಅತ್ಯುತ್ತಮ ಘಟಕ ಪ್ರಶಸ್ತಿ

venur icym ge gataka prasasti copy  ವೇಣೂರು: ಭಾರತೀಯ ಕಥೋಲಿಕ್ ಯುವ ಸಂಚಲನ (ಐಸಿವೈಎಂ), ಕ್ರಿಸ್ತರಾಜ ದೇವಾಲಯ ವೇಣೂರು ಘಟಕಕ್ಕೆ ಮಂಗಳೂರು ಧರ್ಮಪ್ರಾಂತ್ಯದಿಂದ ಕೊಡಮಾಡುವ 2015-16ನೇ ಸಾಲಿನ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.
ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವೇಣೂರು ಐಸಿವೈಎಂ ಘಟಕ ಜನ ಮೆಚ್ಚುಗೆ ಗಳಿಸಿತ್ತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ವಂ| ಸ್ವಾ| ಡೆಲ್ಲಿಸ್ ಮೊರಾಸ್ ಪ್ರಭು ಮತ್ತು ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಅವರು ಮಂಗಳೂರಿನ ಉರ್ವ ಚರ್ಚ್‌ನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಲಭಿಸಲು ವೇಣೂರು ಚರ್ಚ್‌ನ ಧರ್ಮಗುರುಗಳು, ವಿವಿಧ ಸಂಘ ಸಂಸ್ಥೆಗಳು, ಕಾರ್ಯಕ್ರಮದಲ್ಲಿ ಸಹಭಾಗಿತ್ವ ವಹಿದ್ದ ವೇಣೂರು ಗ್ರಾ.ಪಂ., ಫ್ರೆಂಡ್ಸ್ ಕ್ಲಬ್ ಹೊಸಂಗಡಿ, ಗುರುಚೈತನ್ಯ ಸೇವಾ ಟ್ರಸ್ಟ್ ವೇಣೂರು ಹಾಗೂ ಕಂಬಳ ಸಮಿತಿ ಪೆರ್ಮುಡ ಪ್ರೇರಣೆ ನೀಡಿದ್ದಾರೆಂದು ಐಸಿವೈಎಂನ ಮಾಜಿ ಸಚೇತಕ ಅನೂಪ್ ಜೆ. ಪಾಯಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.