HomePage_Banner_
HomePage_Banner_
HomePage_Banner_

ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷ ಡಿ. ಅಚ್ಚುತ ಪೂಜಾರಿ ವಿಧಿವಶ

Advt_NewsUnder_1

achutha Poojary copyಧರ್ಮಸ್ಥಳ ಗ್ರಾಮ ಪಂಚಾಯತ್‌ನ ಹಾಲಿ ಅಧ್ಯಕ್ಷ ಧರ್ಮಸ್ಥಳ ಗ್ರಾಮದ ಸ್ವಾತಿ ನಿಲಯ ನಿವಾಸಿ ಡಿ.ಅಚ್ಚುತ ಪೂಜಾರಿ (47ವ)ರವರು ಜು.13ರಂದು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅಚ್ಚುತ ಪೂಜಾರಿಯವರು ಕಳೆದ ಕೆಲ ಸಮಯಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ನಿಧನರಾದರು. ಧರ್ಮಸ್ಥಳ ಗ್ರಾಮ ಪಂಚಾಯತ್‌ನಲ್ಲಿ ಎರಡನೇ ಅವಧಿಗೆ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿ, ಸದಸ್ಯರಾಗಿ ಆಯ್ಕೆಯಾಗಿ, ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಡಿ.ಅಚ್ಚುತ್ ಪೂಜಾರಿಯವರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾಗಿ,  ಗ್ರಾಮಸಮಿತಿ ಅಧ್ಯಕ್ಷರಾಗಿ ಧರ್ಮಸ್ಥಳದಲ್ಲಿ ವ್ಯಾಪಾರಸ್ಥರಾಗಿದ್ದರು. ಕನ್ಯಾಡಿ ಸೇವಾ ಭಾರತಿಯ ಮಾಜಿ ಅಧ್ಯಕ್ಷರೂ ಆಗಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿ, ವಿದ್ಯಾರ್ಥಿ ಜೀವನದಲ್ಲಿ ಆ.ಭಾ.ವಿ.ಪ ದ ನಾಯಕರಾಗಿ, ಧರ್ಮಸ್ಥಳದ ಹಿಂದೂರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಸಮಾಜ ಸೇವಕರಾಗಿ, ಯಾವುದೇ ರೀತಿಯ ಕಾರ್ಯಕ್ರಮ ಅದು ಸಂಘದ್ದೇ ಇರಲಿ ಪಕ್ಷದ್ದೇ ಇರಲಿ ಅಥವಾ ಊರಿನ ಇನ್ನಿತರ ಉತ್ಸವಗಳಿರಲಿ ತಾನೇ ಮುಂದೆ ನಿಂತು ಧನಸಂಗ್ರಹಿಸಿ ಕೊಡುವ ಉದಾರ ಮನಸ್ಸಿನ ಕೊಡುಗೈ ದಾನಿಯಾಗಿದ್ದರು. ಇವರು ಪತ್ನಿ ಬಬಿತಾ, ಪುತ್ರರಾದ ಮನಿತ್, ಮೋಹಿತ್, ಸಹೋದರ ಧರ್ಮಸ್ಥಳ ಗ್ರಾ.ಪಂ ಹಾಲಿ ಸದಸ್ಯ, ಮಾಜಿ ಅಧ್ಯಕ್ಷ ಡಿ.ಪ್ರಭಾಕರ ಪೂಜಾರಿ, ಸಹೋದರಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ತನುಜಾ ಶೇಖರ್ ಹಾಗೂ ಬಂಧುಮಿತ್ರರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಮನೆಗೆ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಪ್ರಭಾಕರ ಬಂಗೇರ, ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಜಿ.ಗೌಡ, ಜಿ.ಪಂ ಸದಸ್ಯ ಕೊರಗಪ್ಪ ನಾಕ, ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ, ಧರ್ಮರಕ್ಷಾ ನಿಧಿ ಪ್ರಮುಖ್ ಹರೀಶ್ ಪೂಂಜಾ, ತಾ.ಪಂ ಸ್ಥಾಯಿ
ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪ್ರ.ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಗ್ರೇಸಿಯಸ್ ವೇಗಸ್, ವಿವಿಧ ಇಲಾಖೆಯ ಇಲಾಖಾಧಿಕಾರಿಗಳು, ಧರ್ಮಸ್ಥಳ ಗ್ರಾ.ಪಂನ ಸದಸ್ಯರುಗಳು, ಸಿಬ್ಬಂದಿವರ್ಗ, ಸ್ಥಳೀಯ ಹಿ.ಪ್ರಾ.ಶಾಲಾ ಶಿಕ್ಷಕ ವೃಂದದವರು, ವಿವಿಧ ಪಕ್ಷದ ನಾಯಕರುಗಳು, ರಾಜಕೀಯ ಮುಖಂಡರುಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಅಂತಿಮ ದರ್ಶನ ಪಡೆದರು.
ಧರ್ಮಸ್ಥಳ ಕನ್ಯಾಡಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ವ್ಯಕ್ತಪಡಿಸಿದರು.
ಕಣ್ಣುದಾನ : ಅಚ್ಚುತ ಪೂಜಾರಿಯವರು ತನ್ನ ಜೀವಿತಾವಧಿಯಲ್ಲಿ ಎರಡು ಕಣ್ಣುಗಳನ್ನು ದಾನ ಮಾಡಿ , ಇನ್ನೊಬ್ಬರ ಬಾಳಿಗೆ ಬೆಳಕು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.