ಯಕ್ಷಗಾನದಲ್ಲಿ ಮೂಲ ಸ್ವರೂಪಕ್ಕೆ ಧಕ್ಕೆಯಾಗಬಾರದು : ಹರ್ಷೇಂದ್ರ ಕುಮಾರ್

Advt_NewsUnder_1
Advt_NewsUnder_1

Yakshagana sapthaha samaropa copyಉಜಿರೆಯ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಇವರನ್ನು ಅಭಿನಂದಿಸಲಾಯಿತು.

ಉಜಿರೆ  ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಮಾರೋಪ

ಉಜಿರೆ : ಯಕ್ಷಗಾನ ಸೇರಿದಂತೆ ಕಲಾ ಪ್ರಕಾರಗಳಲ್ಲಿ ಕಾಲಕ್ಕೆ ಹೊಂದಿಕೊಂಡು ಅನೇಕ ಬದಲಾವಣೆಗಳಾಗುತ್ತಿದೆ. ಇಂತಹ ಬದಲಾವಣೆ ಸಮಯದಲ್ಲಿ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕಾದುದು ಅಗತ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಅವರು ಜು.9ರಂದು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಒಂದು ವಾರಗಳ ಕಾಲ ಕನ್ನಡಿ ಕಟ್ಟೆ ಆತ್ಮೀಯರ ಬಳಗ ಅರ್ಪಿಸುವ ಮಳೆಗಾಲದ ಜ್ಞಾನಸತ್ರ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಯಕ್ಷಗಾನಾಮೃತ ‘ತಾಳಮದ್ದಳೆ ಸಪ್ತಾಹ’ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಕ್ಷಗಾನ ತರಬೇತಿ ಕೇಂದ್ರಗಳಲ್ಲಿ ತರಬೇತಿಗೆ ಅಭ್ಯರ್ಥಿಗಳು ಬರುತ್ತಿಲ್ಲ. ಇದರಿಂದಾಗಿ ಕಲಾವಿದರಿಗೆ ಈಗ ಜವಾಬ್ದಾರಿ ಹೆಚ್ಚಿದೆ. ಶಿಷ್ಯರನ್ನು ಸೃಷ್ಟಿ ಮಾಡಿ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಮಹತ್ವವಾದ ಕೆಲಸವನ್ನು ಮಾಡಬೇಕಾಗಿದೆ. ಜೊತೆಗೆ ವಿಧ್ವತ್ ಹೊಂದಿದವರು ಪ್ರಸಂಗ ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆಯಿತ್ತರು. ಶುಭಾಶಂಸನೆ ಗೈದ ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ ಅವರು ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲೆಯನ್ನು ಹೊಸ ಸನ್ನಿವೇಶಕ್ಕೆ ಹೊಂದಿಸುವ ಪ್ರಯತ್ನಗಳಾಗಬೇಕು, ಕಲಾವಿದರು ಜನಪ್ರಿಯತೆಯ ಹೆಸರಿನಲ್ಲಿ ಕೊಚ್ಚಿ ಹೋಗಬಾರದು, ಯಕ್ಷಗಾನ ತನ್ನ ಸ್ವರೂಪದಲ್ಲಿ ಯಾವುದೇ ಬದಲಾವಣೆಯಾಗಬಾರದು, ಕಿರಿಯ ಕಲಾವಿದರು ಹಿರಿಯರ ಅನುಭವಗಳನ್ನು ಪಡೆದುಕೊಂಡು ಅಭ್ಯಾಸಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಇವರನ್ನು ಅಭಿನಂದಿಸಲಾಯಿತು. ಖ್ಯಾತ ಯಕ್ಷಗಾನ ಕಲಾವಿದ, ಸಂಘಟಕ ಉಜಿರೆ ಅಶೋಕ್ ಭಟ್ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಶರತ್‌ಕೃಷ್ಣ ಪಡ್ವೆಟ್ನಾಯ ಉಪಸ್ಥಿತರಿದ್ದರು. ಉಜಿರೆ ಅಶೋಕ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಶ್ರೀ ಕೃಷ್ಣ ಪರಂಧಾಮ ಯಕ್ಷಗಾನ ತಾಳಮದ್ದಳೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.