HomePage_Banner_
HomePage_Banner_
HomePage_Banner_

17 ಬಸ್‌ಗಳ ಸಂಚಾರಕ್ಕೆ ಅನುಮತಿ

ನರ್ಮ್ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಾಕಿ ಉಳಿದ ೧೭ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಈ ಅನುಮತಿ ನೀಡಿದ್ದಾರೆ. ನರ್ಮ್ ಯೋಜನೆಯಡಿ ಮಂಗಳೂರು ನಗರಕ್ಕೆ ಒಟ್ಟು ೩೫ ನಗರ ಸಾರಿಗೆ ಬಸ್‌ಗಳು ಮಂಜೂರಾಗಿದ್ದು, ಈಗಾಗಲೇ ೧೮ ಬಸ್‌ಗಳಿಗೆ ಪರ್ಮಿಟ್ ನೀಡಲಾಗಿದೆ. ಇನ್ನುಳಿದ ೧೭ ಬಸ್‌ಗಳ ಮಾರ್ಗದಲ್ಲಿ ಕೆಲ ಮಾರ್ಪಾಟು ಮಾಡಿ, ಸಂಚಾರಕ್ಕೆ ಪರ್ಮಿಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *